ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೀಡುವ ಕಾರ್ಯಕ್ರಮ
ಲೋಕದರ್ಶನ ವರದಿ
ಮಾಂಜರಿ 05 : ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಠಿಯಂತಹ ಪ್ರಕೃತಿ ವಿಕೋಪಗಳನ್ನು ತಡೆಯಬೇಕಾದರೆ ಗಿಡ-ಮರಗಳನ್ನು ಬೆಳೆಸುವುದು ಒಂದೇ ದಾರಿ. ಸಸಿಗಳನ್ನು ನೆಟ್ಟು ಹಾಗೇ ಬಿಡದೇ, ಅವು ಹೆಮ್ಮರವಾಗಿ ಬೆಳೆಯುವವರೆಗೂ ಜವಾಬ್ದಾರಿಯಿಂದ ಪೋಷಿಸಬೇಕು ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಪ್ರೌಢಶಾಲೆ ಬಸಪ್ರಭು ಕೋರೆ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆ ಶಾರದಾದೇವಿ ಕೋರೆ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸಸಿ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಮತ್ತು ಇಂದಿನ ಅನಿವಾರ್ಯತೆಯಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ತಾಯಿ ಹೆಸರನ್ನೇ ಸಶಿಯನ್ನು ಪೋಷಿಸಬೇಕೆಂದು ಮಲ್ಲಿಕಾರ್ಜುನ್ ಕೋರೆ ಹೇಳಿದರು. ಈ ಕಾರ್ಯಕ್ರಮಕ್ಕೆ ಜ್ಯೋತಿ ತಮ್ಮಗೌಡಾ ಬಿಎಸ್ ಅಂಬಿ ಪಿಎನ್ ತಳವಾರ್ ಪಾರ್ಥಸಾರಥಿ ನಂದಾ ಮಹುವಾ ನಿಯೋಗಿ ಎಂಎಸ್ ಕಾನಡೆ ಸಂತೋಷ್ ಹಿರೇಮಠ ವಿನಾಯಕ್ ಪಾಟೀಲ್ ಸಂತೋಷ್ ಖೋತ್ ಎಸ್‌ಎಸ್ ನಿಡುಗುಂದೆ ಮಹಾಂತೇಶ್ ಮೈಶಾಳೆ ಎಎಸ್ ಶಿರಗಾವೇ ಹಾಗೂ ಎನ್‌ಎಸ್‌ಎಸ್ ಮತ್ತು ಏರ್ ಫೋರ್ಸ್ ಕ್ಯಾಂಡಿಡೇಟ್ ವಿದ್ಯಾರ್ಥಿಗಳು ಹಾಜರಿದ್ದರು.