ಕಾಂಗ್ರೆಸ್ ಮುಖಂಡರಿಂದ ಸಲೀಂ ಅಹ್ಮದ್ಗೆ ಸನ್ಮಾನ

ಕಾಂಗ್ರೆಸ್ ಮುಖಂಡರಿಂದ ಸಲೀಂ ಅಹ್ಮದ್ಗೆ ಸನ್ಮಾನ  Salim Ahmed felicitated by Congress leaders


ಶಿಗ್ಗಾವಿ, ಸೆ. 08: ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಆಯ್ಕೆಯಾದ ಸಲೀಂ ಅಹ್ಮದ್ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿ ಗೌರವಿಸಿದರು.   ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಬಂಕಾಪುರ ಪಟ್ಟಣದ ಕಾಂಗ್ರೆಸ್ ಮುಖಂಡ ಮುನ್ನಾ ಗುಲ್ಮಿ ಅವರ ನಿವಾಸಕ್ಕೆ ಆಗಮಿಸಿದ ಸಲೀಂ ಅಹ್ಮದ್ ಅವರನ್ನು ಕ್ಷೇತ್ರದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಖಾದ್ರಿ, ಕೆಪಿಸಿಸಿ ಸಂಯೋಜಕ ಗುರುನಗೌಡ ಪಾಟೀಲ ಸೇರಿದಂತೆ ಸವಣೂರು ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.