ಎಸ್‌ಜಿವಿಆರ್ ಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ

ಎಸ್‌ಜಿವಿಆರ್ ಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ  SGVR School excels in SSLC results

ವಿದ್ಯಾನಗರ 23 : ಶಾರದಾ ವಿದ್ಯಾ ಸಂಸ್ಥೆಯ ಎಸ್ಜಿವಿಆರ್ ಆಂಗ್ಲ ಮಾಧ್ಯಮ ಶಾಲೆ 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ  ಉತ್ತಮ ಸಾಧನೆಗೈದಿದ್ದಾರೆ. ಒಟ್ಟು 85 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕು. ಅಮೂಲ್ಯ ತಂ/ ಉಜ್ಜನಗೌಡ 625ಕ್ಕೆ 605 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. 18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶೇಖಡಾ 95ರಷ್ಟು ಅಂಕಗಳನ್ನು ಗಳಿಸಿ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.  65ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ಈ ಸಂದರ್ಭದಲ್ಲಿ ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಸಂಕುರಾತ್ರಿ ಪ್ರಸಾದ್ ರವರು ಮಕ್ಕಳ ಫಲಿತಾಂಶವನ್ನು ವೀಕ್ಷಿಸಿ ಮಕ್ಕಳು ಪಟ್ಟ ಪರಿಶ್ರಮ ಇದಕ್ಕೆ ಎಲ್ಲಾ ಶಿಕ್ಷಕರ ಸಹಕಾರ ಮತ್ತು ಪಾಲಕರ ಪ್ರೋತ್ಸಾಹವನ್ನು ಕೊಂಡಾಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಆರ್ ರಾಜಶೇಖರ್ ಅವರು ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಇದಕ್ಕೆಲ್ಲ ಶ್ರಮಿಸಿದ ಶಿಕ್ಷಕರು ಪಾಲಕರನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿಗಳು ಕೆ ಕೋಟೇಶ್ವರರಾವ್ ಖಜಾಂಚಿಗಳಾದ ಎಂ. ಸತ್ಯನಾರಾಯಣ, ಗೌರವ ಅಧ್ಯಕ್ಷರಾದ ಟಿವಿ ಸತ್ಯನಾರಾಯಣ ಸಂಸ್ಥೆಯ ಸದಸ್ಯರುಗಳಾದ ಎಸ್ ವೆಂಕಟೇಶ್ವರ್ರಾವ್, ಟಿ.ವಿ. ಸುಬ್ಬರಾವ್, ಕೆಬಿಜಿಕೆ ರೆಡ್ಡಿ ಸರ್ವ ಸದಸ್ಯರು ಎಲ್ಲ ಮಕ್ಕಳನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ಆಡಳಿತಾಧಿಕಾರಿಗಳಾದಂತಹ ವೈ ಸುದರ್ಶನ್ರಾವ್ ಹಾಗೂ ಶೈಕ್ಷಣಿಕ ಪ್ರಗತಿ ಪರೀಶೀಲಕರಾದ ಪಂಪನಗೌಡರು ಮುಖ್ಯೋಪಾಧ್ಯಾಯರಾದ ಉದಯಶ್ರೀ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಎಲ್ಲಾ ಮುದ್ದು ಮಕ್ಕಳನ್ನು ಅಭಿನಂದಿಸಿದ್ದಾರೆ.