ಚಿಕ್ಕೋಡಿ 17: ತಾಲೂಕಿನ ತೋರಣಹಳ್ಳಿ ಗ್ರಾಮದ ಸುಕ್ಷೇತ್ರ ಹನುಮಾನ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜುರಾದ 30 ಲಕ್ಷಗಳ ರೂಪಾಯಿಗಳ ಅನುದಾನದ ಮಂಜೂರು ಪತ್ರ ಶಾಸಕ ಗಣೇಶ್ ಹುಕ್ಕೇರಿ ಅವರು ದೇವಸ್ಥಾನ ಕಮಿಟಿಗೆ ಹಸ್ತಾಂತರಿಸಿದ್ದರು.ತೋರಣಹಳ್ಳಿ ಗ್ರಾಮದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಮಂಜೂರು ಪತ್ರವನು ನೀಡಿ ಮಾತನಾಡಿದ ಶಾಸಕ ಗಣೇಶ್ ಹುಕ್ಕೇರಿ ತೋರಣಳ್ಳಿ ಹನುಮಾನ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಕರ್ನಾಟಕ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ದರ್ಶನಕ್ಕಾಗಿ ಬರುತ್ತಾರೆ. ಈ ದೇವಸ್ಥಾನದ ಜಿರ್ನೋದ್ಧಾರಕ್ಕಾಗಿ ನಮ್ಮ ನಾಯಕ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗು ನಾನು 30 ಲಕ್ಷ ರುಪಾಯಿಗಳ ಅನುದಾನ ಮಂಜೂರು ಮಾಡಿದ್ದೇವೆ. ಈ ಮಂದಿರದ ಆವರಣ ಶನಿ ಮಂದಿರ ನಿರ್ಮಾಣದ ಕಾರ್ಯ ಕೈಗೊಂಡಿದ್ದೇವೆ.
ಮಂದಿರದ ಅಭಿವೃದ್ಧಿಗಾಗಿ ಮಹಾರಾಷ್ಟ್ರದ ಸಚಿವ ಹಸನ್ ಮುಶ್ರೀಫ ಅವರು 50 ಲಕ್ಷ ರು. ನೀಡಿದ್ದಾರೆ. ಈ ಮಂದಿರದ ಅಭಿವೃದ್ಧಿಗಾಗಿ ಯಾವಾಗಲೂ ನಮ್ಮ ಸಹಕಾರ ಇರುತ್ತೆ ಎಂದರು.ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮೀಜಿಗಳು ಮಾತನಾಡಿ ದೇವಸ್ಥಾನಗಳು ನೆಮ್ಮದಿ, ಸಮಾಧಾನ, ಪವಿತ್ರದ ಸ್ಥಾನವಾಗಿವೆ. ತೋರಣಹಳ್ಳಿ ಚಿಕ್ಕ ಗ್ರಾಮವಾಗಿದ್ರು ಸಹ ಹನುಮಾನ ದೇವಸ್ಥಾನ ಇವತ್ತು ಬಂದು ದೊಡ್ಡ ಧಾರ್ಮಿಕ ಭಕ್ತಿ ಕೇಂದ್ರವಾಗಿದೆ. ಈ ದೇವಸ್ಥಾನದ ಅಭಿವೃದ್ಧಿಗಾಗಿ ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಅವರು ಮಾಡುವ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಭೀಮ ಸನ್ಲಚ್ಚಪ್ಗೊಳ್, ಸುಧಾಮ್ ಖಾಡ , ಬಸವರಾಜ್ ಮಳಗೆ, ಅಜಿತ್ ಪಾಟೀಲ್, ರಾಮ ಮಾನೆ, ಪರಶುರಾಮ್ ಕಾಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.