ಕಾಗವಾಡ 17: ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಸಾಕಷ್ಟು ಹಣ ಮಂಜೂರಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕೆಂದು ಶಾಸಕ ರಾಜು ಕಾಗೆ ಗುತ್ತಿಗೆದಾರರಿಗೆ ಸೂಚಿಸಿದರು.
ಅವರು ಶನಿವಾರ ದಿ. 17 ರಂದು ಕಾಗವಾಡ-ಮೊಳವಾಡ ರಸ್ತೆಯ ಒಂದು ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಈ ಕಾಮಗಾರಿಗೆ ಪಂಚಾಯತ ರಾಜ್ ಇಂಜನೀಯರಿಂಗ ಇಲಾಖೆಯ ಸನ್ 2024-25 ನೇ ಸಾಲಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಲೆಕ್ಕಶಿರ್ಷಿಕೆಯಡಿ ಸುಮಾರು 50 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ ಎಂದರು.
ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗುಲೆ, ಸೌರಭ ಪಾಟೀಲ, ಚಿದಾನಂದ ಅವಟಿ, ಅನೀಲ ಮಾಳಿ, ಶಶಿಕಾಂತ ಗೋಮಟೆ, ಅಪ್ಪಾಸಾಹೇಬ ಮಾಳಿ, ಕುಮಾರ ಖೋತ, ಶಂಕರ ಚವ್ಹಾಣ, ಪ್ರಕಾಶ ಧೊಂಡಾರೆ, ರಾಜು ಕರವ, ತಾ.ಪಂ. ಇಓ ವೀರಣ್ಣಾ ವಾಲಿ, ಬಸವರಾಜ ಮಗದುಮ್ಮ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಗುತ್ತಿಗೆದಾರ ಅನೀಲ ಶಿಂಧೆ ಸೇರಿದಂತೆ ಗ್ರಾಮಸ್ಥರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.