ಕುರಾನ್ ಸುಟ್ಟ ಪ್ರಕರಣ : ಕಿಡಿಗೇಡಿಗಳ ಬಂಧನಕ್ಕಾಗಿ ಮುಸ್ಲಿಂರಿಂದ ಬೃಹತ್ ಪ್ರತಿಭಟನಾ ರ್ಯಾಲಿ

Quran burning case: Huge protest rally by Muslims demanding arrest of miscreants

ಬೆಳಗಾವಿ : ತಾಲೂಕಿನ ಸಂತಿಬಸ್ತವಾಡ ಗ್ರಾಮದ ಪ್ರಾರ್ಥನಾ ಮಂದಿರದಲ್ಲಿನ ಮುಸ್ಲೀಮ್ ರ ಪವಿತ್ರ ಗ್ರಂಥ ಕುರಾನ್ ಸುಟ್ಟು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಾವಿರಾರು ಮುಸ್ಲಿಂ ಸಮಾಜದವರು ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು. 


    ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿನ ಪ್ರಾರ್ಥನಾ ಮಂದಿರದಲ್ಲಿರುವ ಕುರಾನ್ ವನ್ನು ಯಾರೊ ಕಿಡಿಗೇಡಿಗಳು ಸುಟ್ಟು ಹಾಕಿದ್ದರು. ಕುರಾನ್ ಸುಟ್ಟ ಕಿಡಿಗೇಡಿಗಳ ಬಂಧನಕ್ಕಾಗಿ ಬೆಳಗಾವಿ ಪೊಲೀಸರಿಗೆ ಮೂರು ದಿನಗಳ ಗಡವವನ್ನು‌ ಮುಸ್ಲಿಂ ರು ನೀಡಿದ್ದರು. 

  ಆದರೆ ಮೂರು ದಿನವಾದರು ಕುರಾನ್ ಸುಟ್ಟ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸದ ಕ್ರಮ‌ ಖಂಡಿಸಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಯಿತು.

  ಅದೇ ರೀತಿಯಾಗಿ ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶಾಸಕ ರಾಜು ಶೇಠ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡ ಸಾವಿರಾರು ಮುಸ್ಲಿಂ ಸಮಾಜದ ಬಾಂಧವರು ಬಳಲಿ ಪ್ರತಿಭಟನಾ ಮೆರವಣಿಗೆ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಭಟಸಿದರು. 

   ಕೆಲಹೊತ್ತು ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ದ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು. ಅಲ್ಲಾ ಹು ಅಕ್ಬರ್‌, ಇಸ್ಲಾಂ ಜಿಂದಾಬಾದ್, ಹಿಂದುಸ್ತಾನ್ ಜಿಂದಾಬಾದ್ ಸೇರಿದಂತೆ ಹಲವಾರು ಘೋಷಣೆ ಹಾಕಿದರು. ಭಾರತ ದೇಶದ ಹಾಗೂ ಇಸ್ಲಾಂ ಧರ್ಮದ ಧ್ವಜಗಳನ್ನು ಹಿಡಿದು ಸಾಗಿದರು.