“ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ-ಯೋಗ” ಎಂಬ ವಿನೂತನ ಕಾರ್ಯಕ್ರಮ

An innovative program called “Yoga for World Unity and Confidence”

“ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ-ಯೋಗ” ಎಂಬ ವಿನೂತನ ಕಾರ್ಯಕ್ರಮ

ಗದಗ:16:ವೈಚಾರಿಕ ಪ್ರಜ್ಞೆ ಮಾನವರಲ್ಲಿ ಕಡಿಮೆ ಆಗಿದ್ದು, ನಿತ್ಯ ಜೀವನದಲ್ಲಿ ಯಂತ್ರಗಳು ಎಷ್ಟೊಂದು ಖುಷಿ ಕೊಡುತ್ತಿವೆ. ಆದರೆ ಮನುಷ್ಯನ ಜೀವನಕ್ಕೆ ನೆಮ್ಮದಿ ಇಲ್ಲದಂತಾಗಿದೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಾನವನ ಮನ-ಮನಕ್ಕೆ ಶಾಂತಿ, ನೆಮ್ಮದಿ, ಸಮಾಧಾನ, ಸಾಮರಸ್ಯ, ವಿಶ್ವಾಸ, ಪರಸ್ಪರರಲ್ಲಿ ನಂಬಿಕೆ, ಸೌಹಾರ್ದತೆ ಮೂಡಿಸುವ ಶ್ರೇಷ್ಠ ಉದಾತ್ತ ಕಾರ್ಯವಾಗಬೇಕಾಗಿದೆ. ಭಾರತೀಯ ಆದಿಸನಾತನ ದೈವೀ ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕ ಮೌಲ್ಯಗಳು, ಜೀವನ ಮೌಲ್ಯಗಳ ಪ್ರಕಾರ ’ವಸುಧೈವಕುಟುಂಬಕಂ’ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಶ್ರೇಷ್ಠ ಭಾವನೆ ಮೂಡಿಸಲು ಆತ್ಮಜಾಗೃತಿಯನ್ನು ಉಂಟುಮಾಡುವ ಕಾರ್ಯವನ್ನು ಈಶ್ವರೀಯ ವಿಶ್ವ ವಿದ್ಯಾಲಯ ಮಾಡುತ್ತಿದೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಈಶ್ವರೀಯ ಜ್ಞಾನ ಮತ್ತು ಸಹಜ ರಾಜಯೋಗ ಶಿಕ್ಷಣದ ಮೂಲಕ ಜಗತ್ತಿನ ಸುಮಾರು 140 ದೇಶಗಳಲ್ಲಿ ಈ ವರ್ಷವೀಡೀ “ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ-ಯೋಗ” ಎಂಬ ವಿನೂತನ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ಇದರಡಿ  ಸಾರ್ವಜನಿಕ ಕಾರ್ಯಕ್ರಮಗಳನ್ನು, ಸೆಮಿನಾರ್ಗಳನ್ನು, ವರ್ಕಶಾಪ್ಗಳನ್ನು, ಸಮ್ಮೇಳನಗಳನ್ನು, ಎಕ್ಸಿಬಿಷನ್ಗಳನ್ನು, ರಾಲಿಗಳನ್ನು ಭಾರತದ ಮೂಲೆ-ಮೂಲೆಗಳಲ್ಲಿ ಆಯೋಜಿಸಿ ಜನತೆಯಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿ ಮಾನವನ ಮನವನ್ನು ಬೆಸೆಯುವ ಕಾರ್ಯ ಮಾಡಲು 1 ಲಕ್ಷ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಿದೆ ಇದರ ಅಂಗವಾಗಿ  ಮೇ-19 ರಂದು ಗದಗ ನಗರದ ಜನತೆಗಾಗಿ ಈ ವಾರ್ಷಿಕ ಬೃಹತ್ ಸೇವಾ ಯೋಜನೆಯ ಆರಂಭೋತ್ಸವ ಸೋಮವಾರ ಬೆಳಿಗ್ಗೆ 10 ರಿಂದ 12 ರ ವರೆಗೆ ಗದುಗಿನ ಸಿದ್ಧರಾಮೇಶ್ವರ ನಗರ (ವಡ್ಡರಗೇರಿ)  ಡಂಬಳ ನಾಕಾ ಸರ್ಕಲ್ ದಲ್ಲಿರುವ ಆಧ್ಯಾತ್ಮಿಕ ಸಂಸ್ಕೃತಿ ಭವನದಲ್ಲಿ  ಕಾರ್ಯಕ್ರಮ ನಡೆಯಲಿದೆ. ಉದ್ಘಾಟಕರಾಗಿ ಅಬು ಪರ್ವತದಿಂದ ಹಿರಿಯ ತಪಸ್ವಿನಿ ರಾಜಯೋಗಿನಿ ಬ್ರಹ್ಮಕುಮಾರಿ ಸುದೇಶ ದೀದೀಜಿ, ಸಹ ಮುಖ್ಯ ಸಂಚಾಲಕರು, ಬ್ರಹ್ಮಕುಮಾರೀಸ್ ಸಂಸ್ಥೆ ಇವರು ಆಗಮಿಸಲಿದ್ದಾರೆ. ಗದಗ ನಗರದ ಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಬಿ ಕೆ ಸ್ವಾತಿ, ಬಿ ಕೆ ಜೋಸ್ನಾ, ಬಿ ಕೆ ರೇಖಾ ರವರು ಉಪಸ್ಥಿತರಿದ್ದರು.