ಚಿಕ್ಕೋಡಿ

ನಾಯಿಂಗ್ಲಜ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

ನಾಯಿಂಗ್ಲಜ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ

ನಾಯಿಂಗ್ಲಜ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ 

ಚಿಕ್ಕೋಡಿ 06:  ತಾಲ್ಲೂಕಿನ ನಾಯಿಂಗ್ಲಜ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕರಾದ ಗಣೇಶ ಹುಕ್ಕೇರಿ ಅವರ ನಿರಂತರ ಪ್ರಯತ್ನದಿಂದ ?80 ಲಕ್ಷ ರೂ. ಅನುದಾನ ಮಂಜೂರಾಗಿದೆ.ಗ್ರಾಮದ ಮುಖಂಡರು ಹಾಗೂ ಸ್ಥಳೀಯರು ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಗ್ರಾಮಾಭಿವೃದ್ಧಿಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ಕಾಮಗಾರಿಯು ಗ್ರಾಮಾಭಿವೃದ್ಧಿಗೆ ಮಹತ್ವದ ಬೆಂಬಲ ನೀಡುವುದರ ಜೊತೆಗೆ ಹಳ್ಳಿಯ ಜನರ ಸಕ್ರಿಯ ಪಾಲ್ಗೊಳ್ಳಿಕೆಯಿಂದ ಅಭಿವೃದ್ಧಿ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯಲಿವೆ. ಶಾಸಕರ ಜನಪರ ದೃಷ್ಟಿಕೋನ ದಿಂದ ಗ್ರಾಮೀಣ ಪ್ರದೇಶದ ಸಮಗ್ರ ಪ್ರಗತಿ ಸಾಧ್ಯವಾಗಿದೆ. 

ಈ ಸಂದರ್ಭದಲ್ಲಿ ಮಾಜಿ ತಾಲೂಕಾ ಪಂಚಾಯತ್ ಸದಸ್ಯರಾದ ಅಜಿತ ಯಳ್ಳೂರೆ ಮಾತನಾಡಿ ಶ್ರಿ “ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂಗ್ಲಜ, ಧೂಳಗನವಾಡಿ ಹಾಗೂ ಯಾದ್ಯಾನವಾಡಿ ಗ್ರಾಮಗಳಲ್ಲಿ ಈಗಾಗಲೇ ಸುಮಾರು ?1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಜೊತೆಗೆ ಧೂಳಗನವಾಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ?80 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಪ್ರಕಾಶ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರ ಸೇವೆ ಶ್ಲಾಘನೀಯ. ಈ ಅನುದಾನಗಳ ಮೂಲಕ ನಮ್ಮ ಗ್ರಾಮಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ” ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಕಾಸ ಕುರಣೆ, ಶಿವಕುಮಾರ ಕಮತೆ, ಕಲ್ಲಪ್ಪ ನೆರ್ಲಿ, ಕಾಕಾಸಾಬ ಚಿಮನೆ, ಮಹಾದೇವ ಮುತ್ನಾಳೆ, ಬಿ.ಎಸ್‌. ಪಾಟೀಲ, ಕಲ್ಲಪ್ಪ ಖೋತ, ರವಿ ನಾಯಕ, ಲಕ್ಷ್ಮಣ ಮಾದರ, ದೀಪಕ ದಿವಟೆ, ಸುನೀಲ ಘಸ್ತೆ, ಸಂದೀಪ ಪಾಟೀಲ, ಜಗದೀಶ ಪಾಟೀಲ, ಆನಂದ ಮಗದುಮ ಹಾಗೂ ಅಪ್ಪಾಸಾಬ ಖೋತ ಉಪಸ್ಥಿತರಿದ್ದರು.ಪೋಟೋ: ತಾಲೂಕಿನ ನಾಯಿಂಗ್ಲಜ್ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗಣ್ಯರು ಚಾಲನೆ ನೀಡಿದರು. 


ಸುದ್ದಿ ಓದಿ