ಮೀನುಗಾರರ ರಕ್ಷಣೆ.;’ದರಿಯಾದೌಲತ್‌’ ಮಾಲೀಕ ಇಕ್ಬಾಲ್ ,ಅಬ್ದುಲ್, ಗಫೂರ್‌ರಿಂದ ಮಾನವೀಯ ಸಹಾಯ

ಮೀನುಗಾರರ ರಕ್ಷಣೆ.;’ದರಿಯಾದೌಲತ್‌’ ಮಾಲೀಕ ಇಕ್ಬಾಲ್ ,ಅಬ್ದುಲ್, ಗಫೂರ್‌ರಿಂದ ಮಾನವೀಯ ಸಹಾಯ Rescue of fishermen.;Humanitarian assistance by Iqbal, Abdul, Ghafoor, owner of Darya Daulat.

ನಡುಗಡ್ಡೆ ಬಸವರಾಜ ದುರ್ಗಾದ ಬಳಿ ಬೋಟ್ ಮುಳುಗಡೆ ಏಳು  

ಮೀನುಗಾರರ ರಕ್ಷಣೆ.;’ದರಿಯಾದೌಲತ್‌’ ಮಾಲೀಕ ಇಕ್ಬಾಲ್ ,ಅಬ್ದುಲ್, ಗಫೂರ್‌ರಿಂದ ಮಾನವೀಯ ಸಹಾಯ 


ಕಾರವಾರ 31 : ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆಯಾಗಿ, ಅದರಲ್ಲಿದ್ದ ಏಳು ಮೀನುಗಾರರ ರಕ್ಷಣೆ ಮಾಡಿದ ಘಟನೆ ಶನಿವಾರ ಹೊನ್ನಾವರ ಸಮೀಪದ ನಡುಗಡ್ಡೆಯಲ್ಲಿ ನಡೆದಿದೆ.ಅಂಕೋಲಾದ ಬೆಳಂಬಾರದ ಅಭಿನಂದನ್ ಮಂಜುನಾಥ್ ಖಾರ್ವಿ ಅವರ ‘ಶ್ರೀ ನವರತ್ನ’ (ಋಆ ಏಂ 07 ಒಒ 2303) ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದದ್ದು ಎಂದು ತಿಳಿದು ಬಂದಿದೆ. ಬೋಟ್ ಬೆಳಂಬಾರ ಬಂದರಿನಿಂದ ಬೆಳಗ್ಗೆ 6 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದು, ಹೊನ್ನಾವರ ಸಮುದ್ರದ ನಡುಗಡ್ಡೆ ಬಸವರಾಜ ದುರ್ಗದ ಬಳಿ ಬಂದಾಗ ಮುಳುಗೊಡಗಿತು.  

 ತಕ್ಷಣ ಹೊನ್ನಾವರ ಕಡಲು ಕಾವಲು  ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ತಾರಿಬಾಗಿಲು ಸಮೀಪ, ಬಸವರಾಜ ದುರ್ಗಾ ನಡುಗಡ್ಡೆಯಿಂದ ಸುಮಾರು 25 ಮೀಟರ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮಧ್ಯಾಹ್ನ  12 ಗಂಟೆಗೆ ಬೋಟ್ನ ಹೊರಭಾಗಕ್ಕೆ ಹಾನಿಯಾಯಿತು.  ಪರಿಣಾಮವಾಗಿ ನೀರು ಬೋಟ್ನೊಳಗೆ ನುಗ್ಗಿ ಬೋಟ್ ಮುಳುಗಡೆಯಾಗಲು ಆರಂಭಿಸಿತು. ಮಾಹಿತಿ ತಿಳಿದ ಕಡಲು ಕಾವಲು ಪಡೆ ಇಕ್ಬಾಲ್  ಗಫೂರರ ಸಹಾಯ ಪಡೆಯಿತು. ಈ ವೇಳೆ ಕಾಸರಕೋಡಿನ ನಿವಾಸಿ , ಬೋಟ್ ಮಾಲೀಕ   ‘ದರಿಯಾದೌಲತ್‌’ (ಋಆ ಏಂ 05 ಒಒ 1847) ಬೋಟ್ ಮಾಲೀಕ ಇಕ್ಬಾಲ್ ಅಬ್ದುಲ್ ಗಫೂರ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಮೀನುಗಾರ  ಇಕ್ಬಾಲ್ ಅವರು ತಮ್ಮ ಬೋಟ್ ಮೂಲಕ ತೆರಳಿ , ಮುಳುಗುತ್ತಿದ್ದ ಬೋಟ್ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ಕಡಲ ತೀರಕ್ಕೆ ಕರೆತಂದಿದ್ದಾರೆ. ವೆಂಕಟೇಶ್ ಕಾರವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಸುರಕ್ಷಿತವಾಗಿ   ದಡ  ಸೇರಿದ್ದಾರೆ.ಘಟನೆಯಲ್ಲಿ  ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೊನ್ನಾವರ ಪೊಲೀಸರು ತಿಳಿಸಿದ್ದಾರೆ.