ಹುಣಸಿಕೋಳಮಠದಲ್ಲಿ ಆದಿಮಾನೋತ್ಸವ ಕಾರ್ಯಕ್ರಮ

ಹುಣಸಿಕೋಳಮಠದಲ್ಲಿ ಆದಿಮಾನೋತ್ಸವ ಕಾರ್ಯಕ್ರಮ Religious program at Hunasikollamath

ಲೋಕದರ್ಶನ ವರದಿ 

ಯಮಕನಮರಡಿ 08: ಸ್ಥಳೀಯ ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಪೀಠ ಹುಣಸಿಕೋಳಮಠದಲ್ಲಿ ಇತ್ತೀಚೆಗೆ ಸಾಯಂಕಾಲ 7:00ಗೆ ಚಂದ್ರಮಾನ ಸಮಯಾನುಸಾರ ವಚನ ಆದಿಮಾನೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸಸಿಗೆ ನೀರುವುನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಹುನಸಿಕೊಳ್ಳಮಠದ ಶ್ರೀ ಸಿದ್ದಬಸವ ದೇವರು ಉತ್ತರಾಧಿಕಾರಿಗಳು ಪ್ರಸ್ತಾವಿಕವಾಗಿ ಮಾತನಾಡಿದರು. ಅಧಿಕಮಾಸದ ವಿಶೇಷತೆ ಬಗ್ಗೆ ಮಾತನಾಡಿದರು. ಈ ಮಾಸದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಕುರಿತು ಮಾತನಾಡಿದರು. ಮೊಮ್ಮನಗಟ್ಟಿ ಶ್ರೀ ಬಸವಾನಂದ ಮಹಾಸ್ವಾಮಿಗಳು ಮಾತನಾಡಿ ಶ್ರೀ ಸಿದ್ದ ಬಸವ ದೇವರ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು, ಅಲ್ಲಮಪ್ರಭು, ನಡೆಸಿದ ಕ್ರಾಂತಿಯ ಘಟನೆಗಳನ್ನು ಸ್ಮರಿಸಿದರು. ಪ್ರತಿ ಮನುಷ್ಯನಲ್ಲಿ ಆತ್ಮವಿಶ್ವಾಸ ಇರಬೇಕು. ಕಲ್ಲು ದೇವರಲ್ಲ, ಮನ್ನು ದೇವರಲ್ಲ, ಅಧಿಕಾರ ಶಾಶ್ವತವಲ್ಲ, ಭಕ್ತಿ ಬಹಳ ದೊಡ್ಡದು ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕರು ಆದ ಶ್ರೀ ಬಿ ಜಿ ಪಾಟೀಲ ರವರು ಮಾತನಾಡಿ ತಮ್ಮ ಜೀವನದಲ್ಲಿ ಸುಖ ದುಃಖಗಳ ಘಟನೆಗಳನ್ನು ಹಾಸ್ಯಮಯವಾಗಿ ಹಂಚಿಕೊಂಡರು. ನಗು ಮನುಷ್ಯನ ಅವಿಭಾಜ್ಯ ಅಂಗ ಮತ್ತು ನಗು ಒಂದು ಯೋಗ ಎಂದು ಹೇಳಿದರು. ನಗುವುದರಿಂದ ಮನುಷ್ಯನ ಆಯುಷ್ಯ ಹೆಚ್ಚಾಗುತ್ತದೆ ಹಾಗೂ ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂತಹ ರೋಗಗಳು ದೂರವಾಗುತ್ತವೆ ಎಂದು ಹೇಳಿದರು. ಸಾನಿಧ್ಯ ವಹಿಸಿದಂತಹ ಹರಿ ಮಂದಿರದ ಶ್ರೀ ಆನಂದ ಮಹಾರಾಜ ಗೋಸಾವಿ  ಅವರು ಮಾತನಾಡಿ ಅಧಿಕ ಮಾಸದ ಬಗ್ಗೆ 365 ದಿನದ ಸೂರ್ಯಮಾನ ಹಾಗೂ 354 ಚಂದ್ರಮಾನದ ಬಗ್ಗೆ ನಡುವಿನ ವ್ಯತ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.  

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಯುವದೂರಿಣರಾದ ಶ್ರೀ ಕಿರಣ ರಜಪೂತ ಹಾಗೂ ಮಠದ ಟ್ರಸ್ಟಿನ ಸದಸ್ಯರಾದ ಗೀರೀಶ ಮೀಶ್ರಿಕೋಟಿ, ನಾಗನೂರಿ ಇನ್ನುಳಿದ ಸದಸ್ಯರು ಭಾಗಿಯಾಗಿದ್ದರು. ಬೇರೆ ಬೇರೆ ಪ್ರದೇಶಗಳಿಂದ ಈ ಕಾರ್ಯಕ್ರಮದಲ್ಲಿ ಭಕ್ತರು ಆಗಮಿಸಿದರು. ಕಾರ್ಯಕ್ರಮ ಮುಗಿದ ನಂತರ ಮಹಾಪ್ರಸಾದವನ್ನು ಏರಿ​‍್ಡಸಲಾಗಿತ್ತು.