ಧಾರ್ಮಿಕ ಮುಖಂಡ ಖಾಜಿ ಅವರಿಂದ ಶಾಸಕ ಮೇಟಿಗೆ ಸನ್ಮಾನ
Religious leader Qazi honors MLA Meti
ತಾಳಿಕೋಟಿ 21 : ಪಟ್ಟಣದ ಮುಸ್ಲಿಂ ಸಮಾಜದ ಧಾರ್ಮಿಕ ಮುಖಂಡರಾದ ಸೈಯದ್ ಶಕೀಲ ಅಹ್ಮದ್ ಖಾಜಿ ಅವರು ಬಾಗಲಕೋಟ ನಗರದ ನೂತನ ಶಾಸಕ ಉಮೇಶ ಎಚ್ ಮೇಟಿ ಇವರನ್ನು ಗೌರವಿಸಿ ಆಶೀರ್ವಾದ ನೀಡಿದರು. ಬಾಗಲಕೋಟ ತಾಲೂಕಿನ ರಾಂಪೂರ ಗ್ರಾಮದಲ್ಲಿ ಶಾಸಕ ಉಮೇಶ ಮೇಟಿ ಇವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಖಾಜಿ ಅವರು ಈ ಸನ್ಮಾನ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಉಮೇಶ ಮೇಟಿ ಅವರು ಕ್ಷೇತ್ರದ ಜನರ ಪ್ರೀತಿಯ ಮತ ಹಾಗೂ ಎಲ್ಲ ಧರ್ಮದ ಗುರುಗಳ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಅದರಲ್ಲಿಯೂ ಮಾಜಿ ಶಾಸಕ ಹಾಗೂ ಹೆಸ್ಕಾಂ ನಿಗಮ ಅಧ್ಯಕ್ಷರಾದ ಅಜೀಂಪೀರ ಖಾದ್ರಿ ಅವರು ನನ್ನ ಗೆಲುವಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ ಅವರಿಗೆ ನಾನು ಋಣಿಯಾಗಿರುವೆ ಎಂದ ಅವರು ನಿಮ್ಮ ಈ ಪ್ರೀತಿ ಹಾಗೂ ವಿಶ್ವಾಸ ಸದಾ ನನ್ನೊಂದಿಗೆ ಹೀಗೆಯೇ ಇರಲಿ ಎಂದರು. ಧಾರ್ಮಿಕ ಮುಖಂಡ ಸೈಯದ ಶಕೀಲ ಅಹ್ಮದ್ ಖಾಜಿ ಅವರು ಮಾತನಾಡಿ ಈ ಉಪ ಚುನಾವಣೆಯಲ್ಲಿ ತಾವು ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದೀರಿ ಇದರಲ್ಲಿ ಎಲ್ಲಾ ವರ್ಗದ ಜನರ ಸಹಕಾರವಿದೆ, ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲು ಶಕ್ತಿಮೀರಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಈ ಸಮಯದಲ್ಲಿ ಹಾರೂನ ಮನಗೂಳಿ, ಜೈನುಲ್ ಆಬದೀನ ನಗಾರ್ಚಿ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 