ಷಣ್ಮುಖಸ್ವಾಮಿ ಅಗಲಿಕೆಗೆ ರಂಭಾಪುರಿ ಜಗದ್ಗುರುಗಳ ಸಂತಾಪ
ಲೋಕದರ್ಶನ ವರದಿ
ಕಲಬುರ್ಗಿ 26 : ಬೀದರ್ ಜಿಲ್ಲೆ ಕೋಲ್ಲಾರ ಕೆ. ಪರಿಸರದಲ್ಲಿರುವ ಜಗದ್ಗುರು ರಂಭಾಪುರಿ ಪೀಠದ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದ ಸಂಚಾಲಕರಾದ ಷಣ್ಮುಖಸ್ವಾಮಿ ಅವರು ಶಿವೈಕ್ಯರಾದ ವಿಷಯ ತಿಳಿದು ಅತ್ಯಂತ ದುಃಖವಾಯಿತು. ಶ್ರೀಯುತರು ಕ್ರಿಯಾಶೀಲರಾಗಿ ಕಾಯಕ ಜೀವಿಗಳಾಗಿ ಯಾವಾಗಲೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಜಗದ್ಗುರು ರೇಣುಕಾಚಾರ್ಯ ಮಂದಿರದ ನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದನ್ನು ಮರೆಯಲಾಗದು. ವಯೋ ಸಹಜವಾದ ಕಾರಣದಿಂದ ಶುಕ್ರವಾರ ಬೆಳಗಿನ ಜಾವ ಲಿಂಗೈಕ್ಯರಾಗಿರುವುದು ನೋವಿನ ಸಂಗತಿ. ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗದವರಿಗೆ ಅನುಗ್ರಹಿಸಲಿ. ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಅನುಗ್ರಹಿಸಲಿ.