ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ೧೦.೪೧ ಲಕ್ಷದ ಮಾದಕ ನಿಷ್ಕಿö್ರಯ

ವಿವಿಧ ಠಾಣೆಗಳಲ್ಲಿ ವಶಪಡಿಸಿಕೊಂಡಿದ್ದ ೧೦.೪೧ ಲಕ್ಷದ ಮಾದಕ ನಿಷ್ಕಿö್ರಯ 10.41 lakh worth of drugs seized at various police stations

ಲೋಕದರ್ಶನ ವರದಿ

ಬೆಳಗಾವಿ ೨೬: ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಎನ್‌ಡಿಪಿಎಸ್ (ಓಆPS) ಕಾಯ್ದೆಯಡಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಂದಾಜು ರೂ.೧೦,೪೧,೫೦೦ ಮೌಲ್ಯದ ೨೨ ಕೆಜಿ ೫೦೦ ಗ್ರಾಂ ಮಾದಕ ವಸ್ತುಗಳನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಸಮಿತಿಯ ಮೂಲಕ ನಿಯಮಾನುಸಾರ ನಿಷ್ಕಿö್ರಯಗೊಳಿಸಲಾಯಿತು. 

ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಬೆಳೆಸುತ್ತಿದ್ದವರ ವಿರುದ್ಧ ನಡೆಸಿದ ಕಾರ್ಯಾಚರಣೆಗಳಲ್ಲಿ ಜಿಲ್ಲೆಯ ೧೪ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ೨೩ ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬAಧಿಸಿದ ಮಾದಕ ವಸ್ತುಗಳನ್ನು ನ್ಯಾಯಾಲಯ ಹಾಗೂ ಮಾದಕ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆದು ನಾಶಪಡಿಸಲಾಯಿತು. 

ಜಿಲ್ಲಾ ಡ್ರಗ್ ಡಿಸ್ಪೋಸಲ್ ಸಮಿತಿಯು ಜೂನ್ ೨೫ರಂದು ಸಂಜೆ ೪.೩೦ ಗಂಟೆಗೆ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಹಾರೂಗೊಪ್ಪ ಗ್ರಾಮದ ರಿ.ಸ.ನಂ. ೨೯/೨ರಲ್ಲಿ ಇರುವ ಬೆಳಗಾಂ ಗ್ರೀನ್ ಎನ್ವಿರಾನ್ಮೆಂಟಲ್ ಮ್ಯಾನೇಜ್‌ಮೆಂಟ್ ಪ್ರೆöÊವೇಟ್ ಲಿಮಿಟೆಡ್ ಘಟಕದಲ್ಲಿ ಪರಿಸರ ನಿಯಮಗಳನ್ನು ಪಾಲಿಸಿ ಮಾದಕ ವಸ್ತುಗಳನ್ನು ನಿಷ್ಕಿö್ರಯಗೊಳಿಸಿತು. 

ಈ ಪ್ರಕ್ರಿಯೆಯು ನ್ಯಾಯಾಲಯದ ಆದೇಶ ಹಾಗೂ ಸಂಬAಧಿತ ಪ್ರಾಧಿಕಾರಗಳ ಅನುಮತಿಯೊಂದಿಗೆ ಎನ್‌ಡಿಪಿಎಸ್ ಕಾಯ್ದೆಯ ನಿಯಮಾನುಸಾರ ನೆರವೇರಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೇರಿದಂತೆ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರು, ಡಿಎಸ್‌ಪಿಗಳು, ಪಿಐ ಗಳು, ಪೊಲೀಸ್ ಸಿಬ್ಬಂದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ಉಪ ಔಷಧ ನಿಯಂತ್ರಕರು ಹಾಗೂ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು.