ಬನಶಂಕರಿ ದೇವಿಯ ಜನ್ಮದಿನ ನಿಮಿತ್ತ ರಜತ ಕೀರೀಟ ಪ್ರಭಾವಳಿ ವಿಶೇಷ ಪೂಜೆ
Rajata Keerita Prabhavali special puja on the occasion of Goddess Banashankari's birthday
ಲೋಕದರ್ಶನ ವರದಿ
ಕಂಪ್ಲಿ 15: ಸ್ಥಳೀಯ 18ನೇವಾರ್ಡಿನ ಭಾರತ ಟಾಕೀಸ್ ಹತ್ತಿರ ಶ್ರೀಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಬನಶಂಕರಿ ದೇವಿಯ ಜನ್ಮದಿನದ ಅಂಗವಾಗಿ ದೇವಿಯ ಪ್ರತಿಮೆಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆದವು. ದೇವಿಯ ಪ್ರತಿಮೆಗೆ ರಜತ ಕೀರೀಟ, ರಜತ ಪ್ರಭಾವಳಿ ಅಳವಡಿಸಿ ಪುಷ್ಪಗಳಿಂದ, ಬಾಳೆಗೊನೆಗಳಿಂದ ಅಲಂಕರಿಸಲಾಗಿತ್ತು. ಈಸಂದರ್ಭದಲ್ಲಿ ಅರ್ಚಕರಾದ ಓದಾ ಬಸವರಾಜ, ಒನಕೆ ಶಂಕರ್, ಶಂಕರಮ್ಮ ದೇವಸ್ಥಾನ ಕಮಿಟಿ ಅಧ್ಯಕ್ಷ ಬಳ್ಳಾರಿ ಬಸವರಾಜ, ಸದ್ಭಕ್ತರಾದ ಕರಡಕಲ್ ವಿರುಪಣ್ಣ, ಕವಿತಾಳ ಶಿವಕುಮಾರ್, ಸಪ್ಪರದ ರಾಘವೇಂದ್ರ, ತುಳಸಿರಾಮಚಂದ್ರ, ಬಿ.ಎಸ್.ಮಂಜುನಾಥ, ಪುಟ್ಟಿ ರಾಘವೇಂದ್ರ, ನೀಲಕಂಠ ಸೇರಿ ಸದ್ಭಕ್ತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 