ಅನಧಿಕೃತ ತಂಬಾಕು ಮಾರಾಟದ ವಿರುದ್ಧ ದಾಳಿ

ಅನಧಿಕೃತ ತಂಬಾಕು ಮಾರಾಟದ ವಿರುದ್ಧ ದಾಳಿ  Raids against the sale of unauthorized tobacco products

ಲೋಕದರ್ಶನ ವರದಿ  

 ಹಾವೇರಿ 27:  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಸಹಯೋಗದಲ್ಲಿ ಸೋಮವಾರ ಸವಣೂರು ಪಟ್ಟಣದ ವಿವಿಧೆಡೆ ಅನಧಿಕೃತವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮತ್ತು ಅಡ್ಡೆಗಳ ಮೇಲೆ ತಪಾಸಣಾ ದಾಳಿ ನಡೆಸಲಾಯಿತು.  

ತಪಾಸಣೆ ವೇಳೆ ಕೋಟ್ಪಾ-2003 ಕಾಯ್ದೆಯ ಕಲಂ 6(ಬಿ) ಅಡಿಯಲ್ಲಿ 8 ಪ್ರಕರಣಗಳಲ್ಲಿ ?800 ಹಾಗೂ ಕಲಂ 4ರ ಅಡಿಯಲ್ಲಿ 9 ಪ್ರಕರಣಗಳಲ್ಲಿ ?900 ಸೇರಿದಂತೆ ಒಟ್ಟು ?1,700 ದಂಡ ವಸೂಲಿ ಮಾಡಲಾಯಿತು.  

ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಕೋಟ್ಪಾ-2003 ಕಾಯ್ದೆಯ ಕುರಿತು ಮಾಹಿತಿ ನೀಡಿ, ಅನಧಿಕೃತವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು.  

ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸ್ಥಳೀಯ ಸಂಸ್ಥೆಯಿಂದ ಕಡ್ಡಾಯವಾಗಿ ಪ್ರತ್ಯೇಕ ಪರವಾನಗಿ ಪಡೆಯಬೇಕು ಹಾಗೂ ಕಾನೂನು ಉಲ್ಲಂಘನೆಯಾಗದಂತೆ ವ್ಯಾಪಾರ ನಡೆಸಬೇಕು ಎಂದು ಸೂಚನೆ ನೀಡಲಾಯಿತು.  ದಾಳಿ ಕಾರ್ಯಾಚರಣೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.