ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ

ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ Raid on ganja sellers; goods worth 9.21 lakh seized, five arrested

ಬೆಳಗಾವಿ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಖದೀಮರನ್ನು ವಶಕ್ಕೆ ಪಡೆದಿರುವ ಬೆಳಗಾವಿ ನಗರ ಸಿಸಿಬಿ ಪೊಲೀಸರು ಬಂಧಿತರಿAದ ಒಟ್ಟು 9,21,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಹಲಗಾ-ಮಚ್ಚೆ ಬೈಪಾಸ್ ಬಳಿಯ ಜಂಕ್ಷನ್ ಬಳಿ ನಡೆದಿದೆ.



    ಈ ಗಾಂಜಾ ಮಾರಾಟ ಪ್ರಕರಣದಲ್ಲಿ ಕೃಷ್ಣಾ @ ರಾಜು ಅಶೋಕ ರಾಮನ್ನವರ(27), (ಸಾ: ಗಣಪತಿ ಗಲ್ಲಿ, ನಾವಗೆ ಬೆಳಗಾವಿ), ಪ್ರಮೋದ ಸಹದೇವ ಪಾಟೀಲ(34), (ಸಾ: ಪಾಟೀಲ ಗಲ್ಲಿ, ರಣಕುಂಡೆ), ರಾಮಕೃಷ್ಣ ನಿವೃತ್ತಿ ಮಾವುರಕರ(32), ಸಾ: ಚಂದಗಡ ಜಿ: ಕೊಲ್ಲಾಪೂರ, ಮಹಾರಾಷ್ಟöç), ಪರುಶರಾಮ ಕಲ್ಲಪ್ಪ ಬುಗಡಿಕಟ್ಟಿ(25), (ಸಾ : ಜಯನಗರ ಮಚ್ಚೆ), ಜಾನು ವಿಠಲ ಗಾವಡೆ(45) (ಸಾ: ಕುಂಬರದಾ ತಾ: ಖಾನಾಪೂರ) ಇವರೆಲ್ಲರೂ ಬಂಧಿತ ಆರೋಪಿತರಾಗಿದ್ದಾರೆ.
      ದಿ.2ರಂದು ಆರೋಪಿತರೆಲ್ಲರು ಸೇರಿ ಹಲಗಾ-ಮಚ್ಚೆ ಬೈಪಾಸ್ ರಸ್ತೆಯ ಮಚ್ಚೆ ಜಂಕ್ಷನ್ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪಿಐ ಮಂಜುನಾಥ ನಾಯಿಕ ಇವರ ಮಾರ್ಗದರ್ಶನದಲ್ಲಿ ಮಂಜುನಾಥ ಭಜಂತ್ರಿ ಪಿಎಸ್‌ಐ ಸಿಸಿಬಿ ವಿಭಾಗ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿತರಿಂದ ರೂ.1,20,000 ಮೌಲ್ಯದ 2 ಕೆ.ಜಿ. 334 ಗ್ರಾಂ ಗಾಂಜಾ, ರೂ.7,00,000 ಮೌಲ್ಯದ ಸುಝುಕಿ ಎಕ್ಷಎಲ್‌ಆರ್ ಕಾರ ಒಂದು, ರೂ.30,000 ಮೌಲ್ಯದ ಹೊಂಡಾ ಡಿಯೋ ಬೈಕ್, ರೂ. 25,000 ಮೌಲ್ಯದ 5 ಮೋಬೈಲ್‌ಗಳು, 2-ಸ್ಯಾಮಸಂಗ, 1-ಒಪ್ಪೋ, 2-ರಿಯಲ್‌ಮಿ ಕಂಪನಿ ಮೋಬೈಲ್ ಹಾಗೂ 46,000 ನಗದು ಹೀಗೆ ಆರೊಪಿತರಿಂದ ಒಟ್ಟು 9,21,000 ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
     ಆರೋಪಿತರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರ ಸಂ.143/2026 ಕಲಂ.20(b)(ii)(ಃ) ಎನ್.ಡಿ.ಪಿ.ಎಸ್ ಕಾಯ್ದೆ-1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ದಾಳಿ ಕೈಗೊಂಡ ಸಿಸಿಬಿ ತಂಡದ ಪಿಐ, ಪಿಎಸ್‌ಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಇವರುಗಳು ಶ್ಲಾಘಿಸಿರುತ್ತಾರೆ.