ಕ್ಯಾಬಿನೆಟ್ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರ ಸ್ಥಾನಕ್ಕೆ ರಾಘವೇಂದ್ರ ಪಾಲನಕರ್ ರಾಜೀನಾಮೆ

ಕ್ಯಾಬಿನೆಟ್ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರ ಸ್ಥಾನಕ್ಕೆ ರಾಘವೇಂದ್ರ ಪಾಲನಕರ್ ರಾಜೀನಾಮೆ  Raghavendra Palankar resigns as Congress media spokesperson after being denied a cabinet minister po

ಲೋಕದರ್ಶನ ವರದಿ 

ಗದಗ  03: ಗದಗ-ಬೆಟಗೇರಿ ನಗರವನ್ನು ಹೈಟೆಕ್ ಸಿಟಿಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಕನಸು ಹೊಂದಿರುವ, ಸಮಸ್ತ ಗದಗ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೂ ಜನಸ್ನೇಹಿ ನಾಯಕರಾದ ಡಾ. ಎಚ್‌.ಕೆ. ಪಾಟೀಲ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ನೀಡದಿರುವುದು ಅವರ ಅಭಿಮಾನಿಗಳು ಹಾಗೂ ಗದಗ ಕ್ಷೇತ್ರದ ನಾಗರಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.  

ಗದಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಡಾ. ಎಚ್‌.ಕೆ. ಪಾಟೀಲ ಅವರು ಕ್ಷೇತ್ರ ಮಾತ್ರವಲ್ಲದೆ ಗದಗ ಜಿಲ್ಲೆಯ ಅಭಿವೃದ್ಧಿಗೆ ಸಲ್ಲಿಸಿರುವ ಅಪಾರ ಕೊಡುಗೆಗಳು ಸ್ಮರಣೀಯವಾಗಿವೆ. ಇಂತಹ ಹಿರಿಯ ನಾಯಕರು ಹಾಗೂ ಅಭಿವೃದ್ಧಿಯ ಸಂಕಲ್ಪ ಹೊಂದಿರುವ ನಾಯಕರಿಗೆ ಸಚಿವ ಸ್ಥಾನ ನೀಡದಿರುವುದು ಗದಗ ಕ್ಷೇತ್ರದ ಜನರ ಮಹತ್ವಾಕಾಂಕ್ಷೆಯ ಕನಸಿಗೆ ತಣ್ಣೀರು ಎರಚಿದಂತಾಗಿದೆ ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.  

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಗದಗ-ಬೆಟಗೇರಿ ನಗರ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರರಾಗಿ ಇತ್ತೀಚೆಗೆ ನೇಮಕಗೊಂಡಿದ್ದ ರಾಘವೇಂದ್ರ ಪಾಲನಕರ್ ಅವರು, ಪಕ್ಷದ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು.   

ಆದರೆ ಗದಗ ಕ್ಷೇತ್ರದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿರುವ ಡಾ. ಎಚ್‌.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ತಿಳಿಸಿರುವ ಅವರು, ಈ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಸ್ಥಾನಕ್ಕೆ ಮನಸ್ಸಿಗೆ ನೋವಿನಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

“ದೇವರಿಲ್ಲದ ಗುಡಿಯಲ್ಲಿ ಪೂಜಾರಿಗೆ ಏನು ಕೆಲಸ ಎಂಬಂತಾಗಿದೆ. ಪಕ್ಷದ ಸಂಘಟನೆಗಾಗಿ ನನ್ನಿಂದಾದ ಸೇವೆ ಸಲ್ಲಿಸುತ್ತಿದ್ದರೂ, ಕ್ಷೇತ್ರದ ಹಿರಿಯ ನಾಯಕರಿಗೆ ಸೂಕ್ತ ಗೌರವ ಸಿಗದಿರುವುದು ಬೇಸರ ತಂದಿದೆ” ಎಂ