ಮಳೆ ನೀರಿನಿಂದಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ: ಈಶ್ವರ ಶಿಲ್ಲೇದಾರ
Provide a permanent solution to the problem caused by rainwater: Ishwara Shilledara
ಬೈಲಹೊಂಗಲ 13 : ನಗರದಲ್ಲಿ ಪ್ರತಿ ಬಾರಿ ಮಳೆಯಾದಾಗಲು ನಗರದ 4 ನೇ ಹಾಗೂ 8ನೇ ವಾರ್ಡ್ ನಲ್ಲಿ ವಾಸಿಸುವ ನಿವಾಸಿಗಳ ಕಷ್ಟ ಹೇಳತೀರದಾಗಿದೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಪತ್ರಕರ್ತ, ಹೋರಾಟಗಾರ ಈಶ್ವರ ಶಿಲ್ಲೇದಾರ ತಿಳಿಸಿದರು. ನಗರದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಹುಡೇದ ಬಾವಿ ಸುತ್ತಮುತ್ತಲಿನ ಪ್ರದೇಶ ವೀಕ್ಷಣೆಗೆ ಆಗಮಿಸಿದ್ದ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕಳೆದ 5,6 ವರ್ಷಗಳಿಂದ ಮಳೆಗಾಲದಲ್ಲಿ ಸ್ಥಳೀಯರ ಸ್ಥಿತಿಯು ಚಿಂತಾಜನಕವಾಗಿದೆ.
ಮೊದಲು ನಗರದ ಮೌನೇಶ್ವರ ನಗರ,ವಿದ್ಯಾನಗರದಿಂದ ಬರುವ ಮಳೆ ನೀರು ನಗರದ ದೊಡ್ಡ ಕೆರೆಯಲ್ಲಿ ಮಿಶ್ರಣವಾಗುತ್ತಿತ್ತು ಹಾಗೂ ಇನ್ನುಳಿದ ನೀರು ಬಸ್ ನಿಲ್ದಾಣದ ಹಿಂಭಾಗದಲ್ಲಿದ್ದ ಖಾಲಿ ಜಾಗೆಯಲ್ಲಿ ಇಂಗಿ ಹೋಗುತ್ತಿತ್ತು. ಆದರೆ ಪ್ರಸ್ತುತ ಕೆರೆ ಅಭಿವೃದ್ಧಿಯಿಂದಾಗಿ ಮೇಲಭಾಗದಿಂದ ಬರುವ ಮಳೆನೀರು ದೊಡ್ಡ ಕೆರೆಗೆ ಹೋಗಲು ಅನುಕೂಲ ಇಲ್ಲದಿರುವುದು ಹಾಗೂ ಬಸ್ ನಿಲ್ದಾಣದ ಹಿಂಭಾಗದಲ್ಲಿನ ಖಾಲಿ ಜಾಗೆಯಲ್ಲಿಯೂ ಸಾರಿಗೆ ಘಟಕದಿಂದ ಅಭಿವೃದ್ಧಿಗೊಂಡಿರುವ ಕಾರಣ ಮಳೆನೀರು ಸರಾಗವಾಗಿ ಇಲ್ಲಿನ ಮನೆಗಳಿಗೆ ನುಗ್ಗುತ್ತಿದೆ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿರುವುದು ಸ್ವಾಗತಾರ್ಹ ಆದರೆ ಅಭಿವೃದ್ಧಿ ಯಿಂದಾಗಿ ಬಡ ಹಾಗೂ ಮದ್ಯಮ ವರ್ಗದ ಜನರ ಜೀವನ ಚಿಂತಾಜನಕವಾಗಿದೆ.
ಪ್ರತಿ ಬಾರಿ ಮಳೆಯಾದಾಗಲೂ ಕೂಡ ಇಲ್ಲಿನ ಮನೆಗಳಿಗೆ ಕಲುಷಿತ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸುವುದಲ್ಲದೇ ಮನೆಗಳಲ್ಲಿ ಉಪ ಜೀವನಕ್ಕಾಗಿ ಸಂಗ್ರಹಿಸಿ ಇಡಲಾಗಿರುವ ದಿನಬಳಕೆ ವಸ್ತುಗಳು ನೀರಲ್ಲಿ ಕೊಚ್ಚಿಹೋಗುತ್ತಿರುವ ಮನವಿದ್ರಾವಕ ಘಟನೆ ನಡೆಯುವುದಲ್ಲದೇ ಕಲುಷಿತ ನೀರಿನ ಜೊತೆಗೆ ವಿಷ ಜಂತುಗಳು ಮನೆಗಳಿಗೆ ನುಗ್ಗುತ್ತಿರುವುದರಿಂದ ಮಕ್ಕಳು,ವೃದ್ಧರ, ಗರ್ಭಿಣಿಯರ ಪಾಡೇನು ಎಂಬ ಚಿಂತೆಯಿಂದಾಗಿ ರಾತ್ರಿಯಿಡಿ ಜೀವ ಕೈಯಲ್ಲಿ ಹಿಡಿದು ಬದುಕುವ ದುಸ್ಥಿತಿ ನಿರ್ಮಾಣವಾಗಿದೆ.ಈ ಭಾಗದಲ್ಲಿ ಮಳೆ ನೀರಿನಿಂದ ಬೇಸತ್ತು ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವ ಇಲ್ಲಿನ ಬಡ ಹಾಗೂ ಮದ್ಯಮ ವರ್ಗದ ಜನರಿಗೆ ಶಾಶ್ವತ ಪರಿಹಾರ ಒದಗಿಸಿ ನಿರ್ಭತಿ ಯಿಂದ ಜೀವನ ಸಾಗಿಸಲು ಅನುವು ಮಾಡಿಕೊಡಬೇಕೆಂದು ತಿಳಿಸಿದರು.
ಕೆ. ಆರ್. ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಕಣಬರಗಿ ಮಾತನಾಡಿ ಸ್ಥಳೀಯ ನಿವಾಸಿಗಳು, ಯುವ ಪತ್ರಕರ್ತರು ಆಗಿರುವ ಈಶ್ವರ ಶಿಲ್ಲೇದಾರ ಎಂಬ ಯುವಕ ಈ ಭಾಗದಲ್ಲಿನ ಜನರ ಸಮಸ್ಯೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಬೇಕು.ಹಾಗೂ ಸ್ಥಳೀಯರು ಅನುಭವಿಸುತ್ತಿರುವ ನೋವನ್ನು ಸರಕಾರಕ್ಕೆ ಮುಟ್ಟಿಸಬೇಕೆಂಬ ಉದ್ದೇಶದಿಂದ ಕಲ್ಲು, ಮುಳ್ಳು, ಗಾಜಿನ ತುಂಡುಗಳ ಸಹಿತ ಪ್ರವಾಹದಂತೆ ದುಮ್ಮಿಕ್ಕಿ ಬರುತ್ತಿರುವ ಕಲುಷಿತ ನೀರಿನಲ್ಲಿ ಸತತ ಮೂರು ಗಂಟೆಗಳ ಕಾಲ ಧರಣಿ ನಡೆಸಿ,ಕಲುಷಿತ ನೀರಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದರೂ ಕೂಡ ಯುವಕನ ಆರೋಗ್ಯದ ಕುರಿತು ಜನಪ್ರತಿನಿಧಿಗಳು ವಿಚಾರಿಸದೇ ಇರುವುದು ಅವರು ಜನರ ಮೇಲೆ ಇಟ್ಟಿರುವ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ,ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ,ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ, ತಹಸೀಲ್ದಾರ ಸದಾಶಿವ ಮಕ್ಕೋಜಿ, ನಗರಸಭೆ ಪೌರಾಯುಕ್ತರಾದ ಭಾಗ್ಯಶ್ರೀ ಹುಗ್ಗಿ,ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ,ಮಂಡಲ ಅಧ್ಯಕ್ಷ ಸುಭಾಷ್ ತುರಮರಿ,ಉಪಾಧ್ಯಕ್ಷ ಶಿವಾನಂದ ಕೋಲಕಾರ,ಬಿಜೆಪಿ ಮುಖಂಡರಾದ ಗುರು ಮೆಟಗುಡ್ಡ, ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ,ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮು ರಜಪೂತ, ತಾಲೂಕು ಅಧ್ಯಕ್ಷ ಸುಭಾಷ್ ಬಾಗೇವಾಡಿ,ಸ್ಥಳೀಯ ನಿವಾಸಿಗಳಾದ ಅಡವಯ್ಯ ಯರಗುದ್ದಿಮಠ,ಶಬ್ಬೀರ ಸಂಗೊಳ್ಳಿ,ಹುಸೇನ ರಸೂಲನವರ,ಮಾಣಿಕ್ ಹುಬ್ಬಳ್ಳಿ,ನಾಗಪ್ಪ ಕುರುಬರ, ಸೇರಿದಂತೆ ಮಹಿಳೆಯರು ಇದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 