ಆದ್ಯತಾ ವಲಯದ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ವಿತರಿಸುವಂತಾಗವಬೇಕ -ಸಂಸದ : ಬಸವರಾಜ ಬೊಮ್ಮಾಯಿ
Priority sector loans should be distributed to the people in large quantities - MP: Basavaraj Bommai
ಲೋಕದರ್ಶನ ವರದಿ
ಹಾವೇರಿ 08: ಜಿಲ್ಲೆಯ ಬಡವರು, ಮಹಿಳೆಯರು ಹಾಗೂ ಸಾಮಾನ್ಯ ಜನರಿಗೆ ಆದ್ಯತಾ ವಲಯದ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವಂತಾಗಬೇಕು ಜೊತೆಗೆ ಮಹಿಳಾ ಸ್ವಸಹಾಯ ಸಂಘಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬ್ಯಾಂಕ್ ಶಾಖೆಗಳನ್ನು ಆರಂಭಿಸಲು ಕ್ರಮ ವಹಿಸಬೇಕು ಎಂದು ಸಂಸದರಾದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) 2025-26ನೇ ಸಾಲಿನ ಮಾರ್ಚ್-2026 ಅಂತ್ಯದವರೆಗೆ ವಿವಿಧ ಕ್ಷೇತ್ರಗಳಿಗೆ ಸಾಲ ವಿತರಣೆ ಮಾಡುವಲ್ಲಿ ಗಮನಾರ್ಹ ಸಾಧನೆ ಮಾಡಿದೆ ನಿಗದಿತ ಗುರಿಯನ್ನು ಮೀರಿ ಒಟ್ಟು 107 ಶೇಕಡಾ ಪ್ರಗತಿ ಸಾಧಿಸಿದೆ ಬ್ಯಾಂಕ್‌ಗೆ ಒಟ್ಟು ?9,809.07 ಕೋಟಿ ಸಾಲ ವಿತರಣೆಯ ಗುರಿ ನಿಗದಿಯಾಗಿದ್ದರೆ, ಮಾರ್ಚ್-2026ರ ಅಂತ್ಯದ ವೇಳೆಗೆ ?10,493.96 ಕೋಟಿ ಸಾಲ ವಿತರಣೆ ಮಾಡಿ 107 ಶೇಕಡಾ ಸಾಧನೆ ದಾಖಲಿಸಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ 5,784.44 ಕೋಟಿ ಗುರಿಗೆ ವಿರುದ್ಧವಾಗಿ ?5,925.38 ಕೋಟಿ ಸಾಲ ವಿತರಣೆ ಮಾಡಿ 102 ಶೇಕಡಾ ಸಾಧನೆ ಮಾಡಲಾಗಿದೆ. ಕೃಷಿ ಅವಧಿ ಸಾಲ ವಿಭಾಗದಲ್ಲಿ 106 ಶೇಕಡಾ ಪ್ರಗತಿ ದಾಖಲಿಸಿದೆ. ಬೆಳೆ ಸಾಲದಲ್ಲಿ ಶೇ.100ರಷ್ಟು ಸಾಧನೆ ಕಂಡುಬಂದಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ) ಕ್ಷೇತ್ರದಲ್ಲಿ ?1,790.63 ಕೋಟಿ ಸಾಲ ವಿತರಣೆ ಮೂಲಕ 104 ಶೇಕಡಾ ಸಾಧನೆ ಮಾಡಲಾಗಿದೆ. ಆದ್ಯತಾ ವಲಯದ ಒಟ್ಟು ಸಾಲ ವಿತರಣೆಯಲ್ಲಿ ?8,178.48 ಕೋಟಿ ವಿತರಣೆ ಮಾಡಿ 101 ಶೇಕಡಾ ಪ್ರಗತಿ ದಾಖಲಿಸಿದೆ ಎಂದರು.
ಆದ್ಯತಾ ರಹಿತ ವಲಯದಲ್ಲಿ ಬ್ಯಾಂಕ್‌ಗಳು ?2,315.48 ಕೋಟಿ ಸಾಲ ವಿತರಣೆ ಮಾಡಿ 136 ಶೇಕಡಾ ಸಾಧನೆ ಮಾಡಿವೆ. ಆದರೆ ಇತರೆ ಆದ್ಯತಾ ವಲಯ (ಒಪಿಎಸ್) ವಿಭಾಗದಲ್ಲಿ ?462.47 ಕೋಟಿ ಸಾಲ ವಿತರಣೆ ಮಾತ್ರವಾಗಿದ್ದು, ಗುರಿಗೆ ಹೋಲಿಸಿದರೆ 77 ಶೇಕಡಾ ಸಾಧನೆ ಮಾಡಿದೆ. ಕೃಷಿ, ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವಂತೆ ತಿಳಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 