ರಾಷ್ಟ್ರಪತಿ ಪದಕ ವಿಜೇತ ಪಿಎಸ್‌ಐ ಮಾರೂತಿ ಜೋಗದಂಡಕರರಿಗೆ ಅಮ್ಮ ಫೌಂಡೇಶನ್ನಿಂದ ಸನ್ಮಾನ

ರಾಷ್ಟ್ರಪತಿ ಪದಕ ವಿಜೇತ ಪಿಎಸ್‌ಐ ಮಾರೂತಿ ಜೋಗದಂಡಕರರಿಗೆ ಅಮ್ಮ ಫೌಂಡೇಶನ್ನಿಂದ ಸನ್ಮಾನ  President's Medal recipient PSI Maruti Jogadandakar felicitated by Amma Foundation

ಲೋಕದರ್ಶನ ವರದಿ 

ಗದಗ, ಜು. 29: ರಾಷ್ಟ್ರಪತಿ ಪದಕ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ ್ಘ ಐಜಿಪಿ) ಕಮೆಂಡೇಶನ್ ಡಿಸ್ಕ್‌ ಪ್ರಶಸ್ತಿ ಪಡೆದ ಗದಗ-ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಮಾರೂತಿ ಜೋಗದಂಡಕರ ಅವರನ್ನು ಅಮ್ಮ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  

ಇತ್ತೀಚೆಗೆ ಬೆಂಗಳೂರಿನ 3ನೇ ಪಡೆ ಕೆಎಸ್‌ಆರ​‍್ಿ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪದಕ ಹಾಗೂ ಡಿಜಿ ಮತ್ತು ಐಜಿಪಿ ಕಮೆಂಡೇಶನ್ ಡಿಸ್ಕ್‌ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಮಾರೂತಿ ಜೋಗದಂಡಕರ ಅವರು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.  

ಅಮ್ಮ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಲಲಿತಾ ಶರಣಪ್ಪ ಗೋಳಗೊಳಕಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣಪ್ಪ ಗೋಳಗೊಳಕಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸಮಾಜಮುಖಿಗಳು ಹಾಗೂ ಗಣ್ಯರು ಭಾಗವಹಿಸಿ ಜೋಗದಂಡಕರರನ್ನು ಅಭಿನಂದಿಸಿದರು.  

ಕಾರ್ಯಕ್ರಮದಲ್ಲಿ ಇಮಾಮ್ ಹುಸೇನ್ ರೋಣದ, ಜಾಕೀರಸಾಬ್ ಅಂಗಡಿ, ಚನ್ನಪ್ಪ ಹರದೊಳ್ಳಿ, ಭಾಷಾಸಾಬ್ ರೋಣದ, ಹನಮಂತಪ್ಪ ಕೋಟೆಕಲ್ಲ, ಅನ್ವರ್ಸಾಬ್ ದೊಡ್ಡಿಹಾಳ, ಮುನ್ನಾಸಾಬ್ ಹೆಬ್ಬಸೂರ, ಯಲ್ಲನಗೌಡ ಸೋಮನಕಟ್ಟಿ, ವಿನಯ್ ಮಂಜರಗಿ, ಸಯ್ಯದ್ ಸಾಹೇಬ್ ತಹಶೀಲ್ದಾರ್, ಫಕ್ರುಸಾಬ್ ಬಡಿಗೇರ, ನಾಗರಾಜ ಹಿರೇಮನಿ ಪಾಟೀಲ, ಪ್ರಭುಕುಮಾರ ಗೋಳಗೊಳಕಿ, ದೇವೇಂದ್ರ ಗಂಗಪ್ಪನವರ್, ಬಸವರಾಜ ಮೈಲಪ್ಪನವರ್, ಬಸವರಾಜ ಹೊಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.