ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರದ ನೂತನ ಬ್ಯಾಂಕ್ ಶಾಖೆ ಉದ್ಘಾಟನೆ
Inauguration of the new branch of the Bellary District Cooperative Central Bank
ಲೋಕದರ್ಶನ ವರದಿ
ಕಂಪ್ಲಿ 07: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನೂತತವಾಗಿ ಆರಂಭಗೊಂಡ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯನ್ನು ಶಾಸಕ ಜೆ.ಎನ್.ಗಣೇಶ ಸೋಮವಾರ ಉದ್ಘಾಟಿಸಿದರು. ನಂತರ ಶಾಸಕ ಗಣೇಶ ಮಾತನಾಡಿ, ಇಲ್ಲಿನ ನೂತನ ಬ್ಯಾಂಕ್ ಶಾಖೆಯಿಂದ ಈ ಭಾಗದ ರೈತರಿಗೆ ಮತ್ತು ಗ್ರಹಕರಿಗೆ ಅನುಕೂಲವಾಗಲಿದೆ. ಸಾಲ ಸೌಲಭ್ಯಗಳು ದೊರೆಯಲಿದ್ದು, ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ನಂತರ ವ್ಯವಸ್ಥಾಪಕಿ ಕೆ.ಶಾರದಾ ಮಾತನಾಡಿ,ಜಿಲ್ಲೆಯಲ್ಲಿ 37 ಶಾಖೆಗಳಿದ್ದು, ಎಮ್ಮಿಗನೂರು ಶಾಖಾ ವ್ಯಾಪ್ತಿಯಲ್ಲಿ ಐದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಒಳಪಡಲಿವೆ. ಎಮ್ಮಿಗನೂರು ಗ್ರಾಮದ ಹೊಸ ಶಾಖೆಯಾಗಲು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಅವರ ಶ್ರಮ ದೊಡ್ಡದಿದೆ. ಇಲ್ಲಿನ ರೈತರು ಶಾಖೆಯಲ್ಲಿ ವ್ಯವಹಾರ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು ಎಂದರು.
ಹಂಪಿ ಸಾವಿರ ದೇವರ ಮಹಾಂತ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ದಿವ್ಯಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ತಿಪ್ಪೇಸ್ವಾಮಿ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಕೆ.ಶ್ರಿನಿವಾಸರಾವ್, ಮುಖಂಡರಾದ ಎಂ.ಸುಧೀರರ, ಸದಾಶಿವಪ್ಪ, ಕೇಶವರೆಡ್ಡಿ, ರಾಘವೇಂದ್ರ, ಜಡೇಶ, ಬ್ಯಾಂಕ್ ಸಿಬ್ಬಂದಿಗಳಾದ ನಜೀರ್ ಸಾಬ್ ಎಂ, ಪ್ರಶಾಂತಕುಮಾರ ಸಾಲಿ ಸೇರಿದಂತೆ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 