ಬಿಡದಿ ಟೌನ್ ಶಿಪ್, ಕನಕಪುರ ಏರ​‍್ೋರ್ಟ್‌ ಬಿಟ್ಟರೆ, ನವಲಿ ಸಮಾನಾಂತರ ಜಲಾಶಯದ ಮಾತಿಲ್ಲ : ಬಿ.ವೈ.ವಿಜಯೇಂದ್ರ

ಬಿಡದಿ ಟೌನ್ ಶಿಪ್, ಕನಕಪುರ ಏರ​‍್ೋರ್ಟ್‌ ಬಿಟ್ಟರೆ, ನವಲಿ ಸಮಾನಾಂತರ ಜಲಾಶಯದ ಮಾತಿಲ್ಲ : ಬಿ.ವೈ.ವಿಜಯೇಂದ್ರ  Apart from the Bidadi Township and the Kanakapura airport, there is no mention of the Navali Balanci

ಲೋಕದರ್ಶನ ವರದಿ 

ಕಂಪ್ಲಿ 07: ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ಇಲ್ಲದಿರುವುದು ದೊಡ್ಡ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಪಾದಯಾತ್ರೆ ಆರಂಭದ ಮುಂಚಿತವಾಗಿ ಪಟ್ಟಣದ ವೀರಶೈವ ಸಂಘದ ಕಛೇರಿಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ, ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿ, ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ಬಲಿಯಾಗಿದ್ದಾನೆ. ನಾಗೇಂದ್ರ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾಕರ ವೈಫಲ್ಯ ಮತ್ತು ಭ್ರಷ್ಟಾಚಾರ ಹಾಗೂ ರೈತರ, ಜನ ಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕೆಂಬ ನಿಟ್ಟಿನಲ್ಲಿ ಪಾದಯಾತ್ರೆ ನಡೆಯುತ್ತಿದೆ. ಸಿಎಂ ಜವಾಬ್ದಾರಿವಹಿಸಿಕೊಂಡು ಮೂರು ತಿಂಗಳಾಗಿದೆ. ಆದರೆ, ಬೀದರನ ಬಸವಕಲ್ಯಾಣಕ್ಕೆ ಹೋಗಿ ಶಿವಲಿಂಗ ಹಿಡಿದು, ಅಣ್ಣ ಬಸವಣ್ಣ ಎಂದು ಡ್ರಾಮಾ ಮಾಡುತ್ತಾರೆ.

ಬಿಡದಿ ಟೌನ್ ಶಿಪ್, ಕನಕಪುರ ಏರ​‍್ೋರ್ಟ್‌ ಬಗ್ಗೆ ಮಾತಾಡ್ತಾರೆ ಹೊರತು ನವಲಿ ಸಮಾನಾಂತರ ಜಲಾಶಯದ ಮಾತಿಲ್ಲ. ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ವೀರಶೈವ ಸಮಾಜದ ಅಪೇಕ್ಷೆ ಸಾಕಷ್ಟಿದೆ. ಮತ್ತು ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬಾರದದಂತೆ ನೋಡಿಕೊಳ್ಳುತ್ತೇವೆ. ಸಮಾಜದ ಪ್ರೀತಿ, ವಿಶ್ವಾಸದಂತೆ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಟಿ.ಎಚ್‌.ಸುರೇಶಬಾಬು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ವೀರಶೈವ ಸಮಾಜದ ಅಧ್ಯಕ್ಷ ಎಸ್‌.ಎಂ.ನಾಗರಾಜ, ಮುಖಂಡರಾದ ಅರವಿ ಬಸವನಗೌಡ, ಪಿ.ಮೂಕಯ್ಯಸ್ವಾಮಿ, ಕೆ.ಎಂ.ಹೇಮಯ್ಯಸ್ವಾಮಿ, ಎಸ್‌.ಎಸ್‌.ಎಂ ಚನ್ನಯ್ಯಸ್ವಾಮಿ, ವಾಗೀಶ, ವಿದ್ಯಾಧರ, ವಾಲಿ ಕೊಟ್ರ​‍್ಪ ಸೇರಿದಂತೆ ಸಮಾಜದವರು ಇದ್ದರು.