ಕಲಾ ಸಂಘಗಳ ಒಕ್ಕೂಟ ವತಿಯಿಂದ ರಿಜಿಸ್ಟರ್ ಮಾಡುವ ಕುರಿತು ಪೂರ್ವಭಾವಿ ಸಭೆ
Preliminary meeting on registration by the Federation of Art Associations
ಲೋಕದರ್ಶನ ವರದಿ
ವಿಜಯನಗರ 19: ಮರಿಮನಹಳ್ಳಿಯ ದುರ್ಗದಾಸ್ ಕಲಾ ಮಂದಿರದಲ್ಲಿ ಜಿಲ್ಲೆಯ ಪ್ರಮುಖ ಬೀದಿ ನಾಟಕ ಕಲಾ ಸಂಘಗಳ ಸದಸ್ಯರುಗಳು ಮುಖ್ಯಸ್ಥರುಗಳು ಸೇರಿಕೊಂಡು ಬೀದಿ ನಾಟಕ ಸಂಘಗಳ ಒಕ್ಕೂಟವನ್ನು ರಿಜಿಸ್ಟರ್ ಮಾಡುವ ಕುರಿತು ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದು. ಮರಿಯಮ್ಮನಹಳ್ಳಿಯ ರಂಗಕರ್ಮಿಯಾದ ಹಿರಿಯರು ರಂಗ ಕಲಾವಿದರು ಆದ ಶ್ರೀಯುತ ಬಿ.ಎಂ.ಎಸ್.ಪ್ರಭು ಸಾರ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ನೀನಾಸಂ ಪದವೀಧರರು ಮರಿಯಮ್ಮನಹಳ್ಳಿ ಇವರ ಅಧ್ಯಕ್ಷತೆಯಲ್ಲಿ.
ಈ ಸಭೆಯಲ್ಲಿ ಮುಖ್ಯವಾಗಿ ವಿಜಯನಗರ ಜಿಲ್ಲೆಯಲ್ಲಿರುವ ಎಲ್ಲಾ ಬೀದಿ ನಾಟಕ ಕಲಾ ಸಂಘಗಳನ್ನು ಒಳಗೊಂಡಂತೆ ಜಿಲ್ಲಾ ಬೀದಿ ನಾಟಕ ಒಕ್ಕೂಟವನ್ನು ನೊಂದಣಿ ಮಾಡಿಸಬೇಕೆಂದು ತೀರ್ಮಾನಿಸಿರುತ್ತಾರೆ. ಆದ್ದರಿಂದ ವಿಜಯನಗರ ಜಿಲ್ಲೆಯಲ್ಲಿ ಸಕ್ರಿಯವಾಗಿ ಬೀದಿ ನಾಟಕದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳು, ಟ್ರಸ್ಟ್ಗಳು, ಕಲಾತಂಡದ ಮುಖ್ಯಸ್ಥರುಗಳು, ಒಳಗೊಂಡಂತೆ ಜಿಲ್ಲೆಯಲ್ಲಿ ಇರುವಂತಹ ನೋಂದಾಯಿತ ಸಂಘ ಸಂಸ್ಥೆಗಳು ಟ್ರಸ್ಟ್ ಗಳು ದಿನಾಂಕ 28 ಜೂನ್ 2026 ರಂದು ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾಮಂದಿರದಲ್ಲಿ ಈ ಕುರಿತಂತೆ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗುವುದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 