ಗಣೇಶನಿಗೆ ಘೋಷ್ ವಾದನದ ಮೂಲಕ ವಂದನೆ

ಗಣೇಶನಿಗೆ ಘೋಷ್ ವಾದನದ ಮೂಲಕ ವಂದನೆ  Paying tribute to Lord Ganesha through *Ghosh* performance

ಲೋಕದರ್ಶನ ವರದಿ 

ಬೆಳಗಾವಿ, ಸೆ.18: ಪಟ್ಟಣದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘೋಷ್ ತಂಡದ ವತಿಯಿಂದ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳಿಗೆ “ಗಣೇಶ ವಂದನಾ” ಕಾರ್ಯಕ್ರಮ ನಡೆಯಿತು.  ಗಣೇಶ ಚತುರ್ಥಿಗೂ ಮುನ್ನ ನಗರದ ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ಎದುರು ಘೋಷ್ ವಾದನದ ಮೂಲಕ ವಂದನೆ ಸಲ್ಲಿಸಲಾಯಿತು. ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಹೂವಿನ ಅಲಂಕಾರ ಹಾಗೂ ರಂಗೋಲಿ ಚಿತ್ತಾರ ಬಿಡಿಸಿ ಸ್ವಾಗತ ಕೋರಲಾಯಿತು.