ಪೈಪ್ ಲೈನ್ ದುರಸ್ತೆ ಕಾರ್ಯ ಮುಕ್ತಾಯ ನೀರು ಪೂರೈಕೆಗೆ ಸಿದ್ಧತೆ
Pipeline repair work completed, preparation for water supply
ಲಕ್ಷ್ಮೇಶ್ವರ" 11 : ಪಟ್ಟಣಕ್ಕೆ ಮೇವುಂಡಿ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ತುಕ್ಕು ಹಿಡಿದು ಹಾಳಾಗಿದ್ದರಿಂದ ಅಮೃತ 2,0 ಯೋಜನೆಯಲ್ಲಿ ಹೊಸ ಪೈಪ್ ಲೈನ್ ಅಳವಡಿಸುವ ಕಾರ್ಯ ಸಾಗಿದ್ದರಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಕುಡಿಯವ ನೀರು ಪೂರೈಕೆಯಲ್ಲಿ ಸುಮಾರು15 -20- ದಿನಗಳಿಂದ ಬಂದ್ ಆಗಿತ್ತು , ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿತ್ತು ಕುಡಿಯುವ ನೀರು ಪೂರೈಸುವಂತೆ ಪುರಸಭೆಗೆ ಪಟ್ಟಣದ ಹಲವಾರು ವಾರ್ಡಿನ ಮಹಿಳೆಯರು ಖಾಲಿ ಕೊಡ ಹಿಡಿದುಕೊಂಡು ಬಂದು ಪ್ರತಿಭಟನೆ ನಡೆಸಿದ್ದರು ಹಾಗೂ ಕನ್ನಡ ಪರ ಸಂಘಟನೆಗಳು ಸಹ ಹೋರಾಟ ಕೈಗೊಂಡಿದ್ದರು.
ಇದರಿಂದ ಪುರಸಭೆಯ ಅಧಿಕಾರಿಗಳು ಬೇಗನೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಕೆ ಕಾರ್ಯವನ್ನು ಹಗಲಿ ರಾತ್ರಿ ಎನ್ನದೆ ಬೇಗನೆ ಕೆಲಸ ಮಾಡಿ ಮುಗಿಸಿದ್ದು ಈಗಾಗಲೇ ಮೇವುಂಡಿ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆ ಆಗುವ ಸೂರಣಗಿ ಜಾಕ್ ವೆಲ್ ಸುದ್ದಿಕರಣ ಘಟಕಕ್ಕೆ ನೀರು ಬಂದು ತಲುಪಿದ್ದು ಇನ್ನೇನು ಎರಡು ಮೂರು ದಿನಗಳಲ್ಲಿ ಪಟ್ಟಣದ ಎಲ್ಲ ವಾರ್ಡಗಳಿಗೆ ಸಮಯದ ವೇಳೆಯ ಮೂಲಕ ಕುಡಿಯುವ ನೀರು ಪೂರೈಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆಯ ಮುಖ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 