ಮೆಣಸಿನಕಾಯಿ ಬೆಳೆಗೆ ಆರಂಭಿಕ ಹಂತದಲ್ಲೇ ಕೀಟ ನಿಯಂತ್ರಣ ಅಗತ್ಯ

ಮೆಣಸಿನಕಾಯಿ ಬೆಳೆಗೆ ಆರಂಭಿಕ ಹಂತದಲ್ಲೇ ಕೀಟ ನಿಯಂತ್ರಣ ಅಗತ್ಯ  Pest control is necessary at the initial stage of the chilli crop

ಲೋಕದರ್ಶನ ವರದಿ 

ಬಳ್ಳಾರಿ 26: ಮೆಣಸಿನಕಾಯಿ ಬೆಳೆಗಾರರಿಗೆ ನಾಟಿ ಮಾಡಿದ ಆರಂಭಿಕ 15ರಿಂದ 25 ದಿನಗಳು ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಕೀಟಬಾಧೆ ನಿಯಂತ್ರಿಸುವ ಮೂಲಕ ಉತ್ತಮ ಇಳುವರಿ ಪಡೆಯಬಹುದು ಎಂದು ಗೋಡ್ರೆಜ್ ಆಗ್ರೋವೆಟ್ ಲಿಮಿಟೆಡ್ನ ಕ್ರಾಪ್ ಕೇರ್ ವಿಭಾಗದ ಸಿಇಒ ರಾಜವೇಲು ಎನ್‌.ಕೆ. ತಿಳಿಸಿದ್ದಾರೆ.  

ನಾಟಿ ಮಾಡಿದ ಮೊದಲ ಕೆಲವು ವಾರಗಳಲ್ಲಿ ಹೀರುವ ಕೀಟಗಳ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದ್ದು, ಇವು ಸಸಿಗಳ ಬೆಳವಣಿಗೆಗೆ ತೀವ್ರ ಹಾನಿ ಉಂಟುಮಾಡುತ್ತವೆ. ಕೀಟಬಾಧೆಯಿಂದ ಶೇ.90ರಷ್ಟು ಇಳುವರಿ ನಷ್ಟವಾಗುವ ಸಾಧ್ಯತೆ ಇರುವುದರಿಂದ ಆರಂಭಿಕ ಹಂತದಲ್ಲೇ ಬೆಳೆ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.  

 “ನಾಟಿ ಮಾಡಿದ ಆರಂಭಿಕ ವಾರಗಳಲ್ಲಿ ಕೈಗೊಳ್ಳುವ ಕ್ರಮಗಳು ಬೆಳೆಯ ಭವಿಷ್ಯದ ಇಳುವರಿ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಸಸಿಗಳ ರಕ್ಷಣೆ ಹಾಗೂ ನೀರೀಕ್ಷಿತ ಇಳುವರಿ ಪಡೆಯಲು ಆರಂಭಿಕ ಕೀಟ ನಿರ್ವಹಣೆ ಅತ್ಯಗತ್ಯ. ಕೀಟಬಾಧೆಯ ಲಕ್ಷಣಗಳು ಗೋಚರಿಸುವ ಮುನ್ನವೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ” ಎಂದು ರಾಜವೇಲು ಎನ್‌.ಕೆ. ತಿಳಿಸಿದ್ದಾರೆ.  

ನಾಟಿ ನಂತರದ ನಿರ್ಣಾಯಕ 15ರಿಂದ 25 ದಿನಗಳಲ್ಲಿ ಕೀಟಬಾಧೆ ನಿಯಂತ್ರಿಸುವ ಮೂಲಕ ಗ್ರೇಸಿಯಾ ಬೆಳೆ ಆರೋಗ್ಯಕರವಾಗಿ ನೆಲೆಗೊಳ್ಳಲು ನೆರವಾಗುತ್ತದೆ. ಇದರಿಂದ ರೈತರು ಉತ್ತಮ ಇಳುವರಿ ಪಡೆಯಲು ಹಾಗೂ ಮುಂಗಾರು ಹಂಗಾಮಿನಲ್ಲಿ ಆತ್ಮವಿಶ್ವಾಸದಿಂದ ಕೃಷಿ ಮುಂದುವರಿಸಲು ಸಾಧ್ಯವಾಗುತ್ತದೆ.