ಕಾರವಾರ

ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ: ಮೋಹನ ಸಿದ್ಧಾಂತಿ

ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ: ಮೋಹನ ಸಿದ್ಧಾಂತಿ

ಲೋಕದರ್ಶನ ವರದಿ 

  ದಾಂಡೇಲಿ 29: ಪದವಿ ಹಂತದಲ್ಲಿ ಕಲಿಯುತ್ತಲಿರುವ ವಿದ್ಯಾರ್ಥಿಗಳಿಗೆ ಈ ಕಲಿಕೆ ಅವಧಿಯು ಅತ್ಯಮುಲ್ಯವಾಗಿರುತ್ತಿದ್ದು, ಪಠ್ಯದ ಜೊತೆಯಲ್ಲಿ ಪಟ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ತಮ್ಮ ವ್ಯಕತ್ತಿತ್ವ ವಿಕಸನ ಗಳಿಸಿಕೊಂಡಲ್ಲಿ ಉತ್ತಮ ಭವಿಷ್ಯವನ್ನು ಕಾಣಬಹುದು ಎಂದು ಧಾರವಾಡದ ಕೆ.ಇ.ಬೋರ್ಡ ಪದವಿ ಮಹಾವಿದ್ಯಾಲಯದ ಮೋಹನ ಸಿದ್ದಾಂತಿ ನುಡಿದರು. ಅವರು ಇಂದು ಮದ್ಯಾನ್ಹ ಸ್ಥಳೀಯ ಬಂಗೂರ  ನಗರ ಪದವಿ ಮಹಾವಿದ್ಯಾಲಯದ 2026-27 ನೇ ಸಾಲಿನ ಸಾಂಕ್ಕೃತಿಕ, ಕ್ರೀಡಾ, ಎನ್‌.ಎಸ್‌.ಎಸ್‌., ರೆಡ್ ಕ್ರಾಸ್, ರೆಡ್ ರಿಬ್ಬನ್, ರೆಂಜರಸ್ ಹಾಗೂ ರೋವರ​‍್ಸ‌ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಕೊಂಡು ಗುರಿ ತಲುಪಿದಲ್ಲಿ ಜೀವನ ಸಾರ್ಥಕ ಎಂದು ನುಡಿದ ಅವರು ಬರುವ ದಿನಗಳಲ್ಲಿ ಉತ್ತಮ ಭವಿಷ್ಯ ನಿಮಗಾಗಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು. ಶಿಕ್ಷಣ ಸಂಸ್ಥೆಯ ಸಂಯೋಕರಾದ ರಾಗವೇಂದ್ರ ಜೆ.ಆರ್‌. ಗೌರವ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸಿಬ್ಬಂದಿ ಸಂಯೋಜಕರಾದ ಎಸ್‌.ಕೆ. ಬಾಗೇವಾಡಿ, ಡಾ. ವಿನಯ್ ಎಸ್, ಡಾ, ಎಸ್‌.ಎಸ್‌. ಹಿರೇಮಠ, ಡಾ. ಲಕ್ಷ್ಮಿ ಪರಭ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌತಮ ಶಿರಹಟ್ಟಿ ಆಸೀಪ್ ಶೇಖ, ಶ್ರೀಹರಿ ಬಸವರಾಜ ನಂದೀಶ ಇಕ್ಕನಗುಟ್ಟಿ ವಿಕ್ರಂ ಚವ್ಹಾಣ ನಿಖಿತಾ ಮಾಹೇಕರ್ ಹಾಗೂ ರಕ್ಷಿತಾ ಮಾವಿನಕರ್ ಚಟುವಟಿಕೆಗಳ ಕುರಿತಂತೆ ವರದಿ ವಾಚಿಸಿದರು. ಪ್ರಾಂಶುಪಾಲ ಡಾ. ಬಿ.ಎಲ್ ಗುಂಡುರ ಅಧ್ಯಕ್ಷತೆ ವಹಿಸಿದ್ದರು. 


ಸುದ್ದಿ ಓದಿ