ಅಭಯ ಪಾಟೀಲರ ಮೇಘಾ ಡ್ರಾಯಿಂಗ್ ಸ್ಪಧರ್ೆಗೆ ಜನ ಮೆಚ್ಚುಗೆ
ಲೋಕದರ್ಶನ ವರದಿ
ಬೆಳಗಾವಿ, 16: ಶಾಲಾ ವಿಧ್ಯಾಥರ್ಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಬೆಳೆಸುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರು ಆಯೋಜಿಸುವ ಮೇಘಾ ಡ್ರಾಯಿಂಗ್ ಸ್ಪದರ್ೆ ಒಂಬತ್ತನೇಯ ವರ್ಷಕ್ಕೆ ಕಾಲಿಟ್ಟಿದೆ. ಬೆಳಗಾವಿಯ ವ್ಯಾಕ್ಸೀನ್ ಡಿಪೋ ಪರಿಸರದಲ್ಲಿ ನಡೆಯುವ ಈ ಸ್ಪದರ್ೆಗೆ ಈ ವರ್ಷ 356 ಶಾಲೆಗಳ 14 ,842 ವಿಧ್ಯಾಥರ್ಿಗಳು ಭಾಗವಹಿಸುವ ಮೂಲಕ ಹೊಸ ದಾಖಲೆ ನಿಮರ್ಿಸಿದ್ದಾರೆ.
ಮೇಘಾ ಡ್ರಾಯಿಂಗ್ ಸ್ಪದರ್ೆಯಲ್ಲಿ ಕಿರಿಯರ ವಿಭಾಗ ಒಂದನೇಯ ತರಗತಿಯಿಂದ ಎಂಟನೆಯ ತೆಗತಿಯವರೆಗೆ ಹಿರಿಯರ ವಿಭಾಗ ಹೈಸ್ಕೂಲ್ ವಿಭಾಗದ ವಿಧ್ಯಾಥರ್ಿಗಳಿಗೆ ಪ್ರತ್ಯೇಕವಾದ ವಿಷಯಗಳನ್ನು ನೀಡಲಾಗಿತ್ತು ಕಿರಿಯ ವಿದ್ಯಾಥರ್ಿಗಳಿಗೆ ಹಣ್ಣು ಹಂಪಲ ಪ್ರಾಣಿ ಪಕ್ಷಿಗಳ ಚಿತ್ರ ಬಿಡುವದು ಹಿರಿಯ ವಿಧ್ಯಾಥರ್ಿಗಳಿಗೆ ಜಾತ್ರೆ ,ದನದ ಸಂತೆ,ಲೇಜಿಮ್ ಆಡುವ ಭಂಗಿ ಹೀಗೆ ಹಿರಿಯರ ಮತ್ತು ಕಿರಿಯರ ವಿಭಾಗಕ್ಕೆ ಪ್ರತ್ಯೇಕ ವಿಷಯಗಳನ್ನು ನೀಡಲಾಗಿತ್ತು. ಬೆಳಗಾವಿಯ ವ್ಯಾಕ್ಸೀನ್ ಡಿಪೋ ತೆರೆದ ಪರಿಸರದಲ್ಲಿ ಗಿಡಗಳ ನೆರಳಲ್ಲಿ ಕುಳಿತು ಹದಿನಾಲ್ಕು ಸಾವಿರದ ಎಂಟನೂರಾ ನಲವತ್ತೆರಡು ವಿಧ್ಯಾಥರ್ಿಗಳು ತಮ್ಮ ಕಲೆಯನ್ನು ಬಿಳಿ ಹಾಳೆಯ ಮೇಲೆ ಕಲರ್ ಪುಲ್ ಆಗಿ ನಮೂದಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಪ್ರತಿವರ್ಷ ವಿಧ್ಯಾಥರ್ಿಗಳ ಸಂಖ್ಯೆ ಹೆಚ್ಚಾಗುತ್ತಿದೆ ವಿಧ್ಯಾಥರ್ಿಗಳು ಒಳ್ಳೆಯ ಚಿತ್ರಗಳನ್ನು ಬಿಡಿಸಿದ್ದಾರೆ ಇದರಲ್ಲಿ ಟಾಪ್ 12 ಚಿತ್ರಗಳನ್ನು ಆಯ್ಕೆ ಮಾಡಿ ಈ ಹನ್ನೆರಡೂ ಚಿತ್ರಗಳನ್ನು ಕ್ಯಾಲೆಂಡರ್ ಗಳಲ್ಲಿ ಮುದ್ರಿಸಿ ಸಾವಿರಾರು ಕ್ಯಾಲೆಂಡರ್ ಗಳನ್ನು ಬೆಳಗಾವಿ ನಗರದಲ್ಲಿ ಹಂಚಿಕೆ ಮಾಡುತ್ತೇವೆ ಉತ್ತಮ ಚಿತ್ರ ಬಿಡಿಸಿದ ಹನ್ನೆರಡು ಜನ ವಿಧ್ಯಾಥರ್ಿಗಳಿಗೆ ಬಹುಮಾನವಾಗಿ ಸೈಕಲ್ ಕೊಡುತ್ತೇವೆ ಎಂದು ಅಭಯ ಪಾಟೀಲ ಹೇಳಿದರು.
ನೂರು ಜನ ವಿಧ್ಯಾಥರ್ಿಗಳಿಗೆ ಉತ್ತೇಜನ ಬಹುಮಾನ ಮತ್ತು ಸಮಾಧಾನಕರ ಬಹುಮಾನಗಳನ್ನು ಕೊಡುತ್ತೇವೆ ಜನೇವರಿ ತಿಂಗಳಲ್ಲಿ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿರು ಮಾಲಿನಿ ಸಿಟಿಯಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಬಹುಮಾನ ವಿತರಿಸುವ ಜೊತೆಗೆ ಟಾಪ್ 12 ವಿಧ್ಯಾಥರ್ಿಗಳ ಪಾಲಕರನ್ನು ಇದೇ ಸಂಧರ್ಭದಲ್ಲಿ ಸತ್ಕಾರ ಮಾಡುತ್ತೇವೆ ಎಂದು ಅಭಯ ಪಾಟೀಲ ತಿಳಿಸಿದರು. ಇಂದು ಬೆಳಗಾವಿಯಲ್ಲಿ ನಡೆದ ಮೇಘಾ ಡ್ರಾಯಿಂಗ್ ಸ್ಪದರ್ೆ ನೋಡಿದರೆ ಅಮೀರಖಾನ್ ಅಭಿನಯದ ತಾರೇ ಜಮೀನ್ ಪೆ ಚಿತ್ರದ ಡ್ರಾಯಿಂಗ್ ಸ್ಪದರ್ೆ ನೆನಪಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 