ನಾಳೆಯಿಂದ ಪಾಂಡುರಂಗ ವಿಠ್ಠಲ ಪ್ರವಚನ
Panduranga Vitthala discourses starting tomorrow
ತಾಳಿಕೋಟಿ 19: ಆಷಾಢ ಏಕಾದಶಿ ನಿಮಿತ್ಯವಾಗಿ ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ್ ವತಿಯಿಂದ ಪಾಂಡುರಂಗ ವಿಠ್ಠಲ ಪ್ರವಚನ ಜುಲೈ 21 ರಿಂದ ಆರಂಭವಾಗಲಿದೆ. ಪ್ರತಿದಿನ ಸಾಯಂಕಾಲ 6 ರಿಂದ 7ಗಂಟೆಯವರೆಗೆ ವಿಠ್ಠಲ ಮಂದಿರದಲ್ಲಿ 25ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಈ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜುಲೈ 21ರಂದು ಸಂಜೆ 6ಗಂಟೆಗೆ ನಡೆಯಲಿದ್ದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಉದ್ಘಾಟಿಸುವರು. ನಾಡಿನ ಖ್ಯಾತ ಪ್ರವಚನಕಾರ ಸಿದ್ದರಾಮ ಶಿವಯೋಗಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿರುವರು. ಪ್ರವಚನದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ್ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 