ಗುರುವಿನ ಮಾರ್ಗದರ್ಶನ ಇದ್ದರೆ ನಮ್ಮ ಜೀವನ ಪಾವನ: ಸುಭಾಷ ಶೇವಾಳೆ ಮಹಾರಾಜರು
Our life is pure if we have the guidance of a Guru: Subhash Shewale Maharaj
ರಾಯಬಾಗ, 24 : ಗುರುವಿನ ಮಾರ್ಗದರ್ಶನ ಇದ್ದರೆ ನಮ್ಮ ಜೀವನ ಪಾವನಗೊಳ್ಳುತ್ತದೆ ಎಂದು ಅಥಣಿ ತಾಲೂಕಿನ ಮೊಳವಾಡದ ಸುಭಾಷ ಶೇವಾಳೆ ಮಹಾರಾಜರು ಹೇಳಿದರು. ಸೋಮವಾರ ರಾತ್ರಿ ತಾಲೂಕಿನ ನಂದಿಕುರಳಿ ಗ್ರಾಮದ ಪಂಚಲಿಂಗೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಸೋಮವಾರ ಉಪವಾಸದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,
ಬ್ರಹ್ಮ, ವಿಷ್ಣು, ಮಹೇಶ್ವರ ಸಮನಾಗಿರುವ ಗುರುವಿನ ಸಾಮರ್ಥ್ಯ ಅರಿತು ನಡೆದವರ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಅನುಭವದಿಂದ ಬರುವ ಜ್ಞಾನ, ಯಾವ ವಿದ್ಯೆಗೂ ಕಡಿಮೆ ಇಲ್ಲ ಎಂದು ಹೇಳಿದರು. ಸಾನ್ನಿಧ್ಯ ವಹಿಸಿ ಮಾತನಾಡಿದ ವೀರಭದ್ರ ಸ್ವಾಮಿಜೀಯವರು, ಸಾಧು, ಸಂತರ, ಮಹಾಪುರುಷರ ಜನ್ಮ ಭೂಮಿಯಾಗಿರುವ ಭಾರತ ದೇಶದಲ್ಲಿ ಜನಿಸಿರುವ ನಾವು ಪುಣ್ಯವಂತರು. ಇಂದಿನ ಯುವ ಪೀಳಿಗೆಗೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಧ್ಯಾನ ಮತ್ತು ಗುರು ಪರಂಪರೆ ಮಹತ್ವವನ್ನು ತಿಳಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಂದಿಕುರಳಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 