ಬೆಳಗಾವಿ

ಶ್ರಾವಣ ಮಾಸದ ಪ್ರಯುಕ್ತ ಶ್ರೀ ಗುರು ಬಸವ ಭಾವಪೂಜೆ, ಶ್ರೀರಕ್ಷೆ ಕಾರ್ಯಕ್ರಮ

ಶ್ರಾವಣ ಮಾಸದ ಪ್ರಯುಕ್ತ ಶ್ರೀ ಗುರು ಬಸವ ಭಾವಪೂಜೆ, ಶ್ರೀರಕ್ಷೆ ಕಾರ್ಯಕ್ರಮ


ನೇಸರಗಿ, ಆ. 29: ಕೆಪಿಸಿಸಿ ಸದಸ್ಯೆ ಹಾಗೂ ಮಾಜಿ ಜಿಪಂ ಸದಸ್ಯೆ ಶ್ರೀಮತಿ ರೋಹಿಣಿ ಪಾಟೀಲ ಹಾಗೂ ಅನೇಕ ಮಹಿಳೆಯರ ನೇತೃತ್ವದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸಮೀಪದ ನೇಗಿನಹಾಳ ಗ್ರಾಮದ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ನೇಗಿನಹಾಳ ನಿವಾಸದಲ್ಲಿ ಶುಕ್ರವಾರ ಶ್ರೀ ಗುರು ಬಸವ ಭಾವಪೂಜೆ, ಅನುಭವ ಶ್ರೀಗುರು ಬಸವ ಹಾಗೂ ಶ್ರೀರಕ್ಷೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಕಿತ್ತೂರು ಮತಕ್ಷೇತ್ರದ ಅನೇಕರು ಶ್ರೀಮತಿ ರೋಹಿಣಿ ಪಾಟೀಲ ಅವರಿಂದ ಶ್ರೀರಕ್ಷೆ ಕಟ್ಟಿಸಿಕೊಂಡು, ಅದ್ಧೂರಿಯಾಗಿ ಶ್ರೀ ಗುರು ಬಸವ ಶ್ರೀರಕ್ಷೆ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  

ಶ್ರಾವಣ ಮಾಸದ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ರೋಹಿಣಿ ಮೇಡಂ ಅವರ ಮಹಿಳಾ ಬಳಗ ಹಾಗೂ ಅಭಿಮಾನಿಗಳು ಸಡಗರ-ಸಂಭ್ರಮದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. 


ಸುದ್ದಿ ಓದಿ