ಪತ್ರಿಕೆ ವಿತರಕ ಶಿವನಗೌಡ ಪಾಟೀಲ್ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ತ್ಯುತ್ತಮ ಸಾಧನೆ
ಕೊಪ್ಪಳ 15: ಪತ್ರಿಕೆ ವಿತರಣೆ ಮಾಡುತ್ತಾ ಶಿವನಗೌಡ ಪಾಟೀಲ್ ಉತ್ತಮ ಅಂಕ ಪಡೆದಿದ್ದು ಶ್ಲಾಘನೀಯ ಎಂದು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರಿ ಮೋತಿ ಹರ್ಷ ವ್ಯಕ್ತಪಡಿಸಿದರು.
ನಗರದ ಹಸನ್ ರಸ್ತೆಯಲ್ಲಿರುವ ಡಾ: ಟಿ.ಹೆಚ್.ಮುಲ್ಲಾ ಆಸ್ಪತ್ರೆ ಮುಂಭಾಗದ ಹಟಗಾರ ಪೇಟೆ ಓಣಿಯ ಮನೆಯಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 559 ಅಂಕ ಪಡೆದ ಪತ್ರಿಕೆ ವಿತರಕ ಶಿವನಗೌಡ ಪಾಲಾಕ್ಷಿಗೌಡ ಪಾಟೀಲ್ ಅವರಿಗೆ ಅಖಿಲ ಕರ್ನಾಟಕ ಪತ್ರಿಕಾ ವಿತರಕರಕ್ಷೇಮಾಭಿವೃದ್ಧಿ ಸಂಘ ಹಾಗೂ ಕೊಪ್ಪಳ ಜಿಲ್ಲಾ ಸಂಘದಿಂದ ಸನ್ಮಾನಿಸಿದ ರಾಜ್ಯ ಅಧ್ಯಕ್ಷ ಶಂಕರ್‌ಕುದುರಿಮೋತಿ ಮುಂದುವರೆದು ಮಾತನಾಡಿ ಪತ್ರಿಕೆ ವಿತರಕರು ಕಲಿಕೆಯೊಂದಿಗೆ ಗಳಿಕೆ ಮಾಡುತ್ತಾರೆ, ಮನೆಗೆ ಒಳ್ಳೆ ಮಗ, ಶಾಲೆಗೆ ಆದರ್ಶ ವಿದ್ಯಾರ್ಥಿ, ಸಮಾಜಕ್ಕೆ ಮಾದರಿ ಯುವಕರಾಗುತ್ತಾರೆ, ಒಳನಾಟದಿಂದ ಜನರೊಂದಿಗೆ ಹೇಗೆ ಬೆರೆಯುವದು,ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬುದು ಕಲಿಸುವುದೇ ಪತ್ರಿಕಾ ವಿತರಣಾ ವೃತ್ತಿ, ಪತ್ರಿಕೆ ವಿತರಣೆಗೆ ಬರುವವರು ಬಡತನದಲ್ಲಿ ಬದುಕು ಕಟ್ಟಿಕೊಳ್ಳಬೇಕು, ಐದು ನೂರು,ಸಾವಿರ ರೂಪಾಯಿಗಳು ಬಂದರೆ ಸಿಲೆಂಡರಿಗೆ,ವಿದ್ಯುತ್ ಬಿಲ್ಲಿಗೆ,ಮನೆ ಬಾಡಿಗೆಗೆಆಗುತ್ತದೆ, ಇದರಿಂದತಂದೆತಾಯಿಗೆ ಸಹಾಯ ಮಾಡಬೇಕುಎನ್ನುವ ವಿಚಾರದಿಂದ ಬೆಳಿಗ್ಗೆ ಪತ್ರಿಕೆ ಹಂಚುತ್ತಾರೆ, ಕೊಪ್ಪಳದ ಪತ್ರಿಕೆ ವಿತರಕರ ಸಂಘದವರು ಉಳಿತಾ ಆರಂಭಿಸಿದ್ದಾರೆ. ಈಗಿನ ಸಸಿ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ, ಪತ್ರಿಕೆ ವಿತರಕರು ಶಾಲಾ ಕಾಲೇಜುಗಳಲ್ಲಿ ಉತ್ತಮ ಅಂಕ ಪಡೆದವರನ್ನು ಸನ್ಮಾನಿಸಿ ಪ್ರೋತ್ಸಾಹಿಡುತ್ತಿರುವುದು ಒಳ್ಳೆಯ ಬೆಳವಣಿಗೆ, ಶಿವನಗೌಡ ಪಾಟೀಲ್‌ಅವರುಎಸ್‌ಎಸ್‌ಎಲ್ ಸಿ ಯಲ್ಲಿ 559 ಅಂಕಗಳನ್ನು ಪಡೆದಿದ್ದು, ಪಿಯುಸಿಯಲ್ಲಿ ಅದಕ್ಕಿಂತಒಂದೇ ಅಂಕ ಹೆಚ್ಚು ಪಡೆದರೂ ನಾನು ಸ್ವಂತಐದು ಸಾವಿರ ರೂಪಾಯಿಗಳನ್ನು ನೀಡುತ್ತೇನೆಎಂದು ಘೋಷಿಸಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಉತ್ತಮ ಅಂಕಗಳಿಸಿದ ಶಿವನಗೌಡ ಅವರುತಮ್ಮ ವಿದ್ಯಾಭ್ಯಾಸ ಮುಂದುವರಿಸಲು ನಮ್ಮೆಲ್ಲರ ಸಹಕಾರವಿದೆ. ಪತ್ರಿಕೆಗಳಲ್ಲಿ ಮೂಲವಾಗಿ ಕೆಳಮಟ್ಟದಲ್ಲಿ ಕೆಲಸ ಮಾಡುವ ಪತ್ರಿಕೆಗಳನ್ನು ಓದುಗರಿಗೆತಲುಪಿಸುವ ಪತ್ರಿಕಾ ವಿತರಕರುಇಲ್ಲದಿದ್ದರೆ ಪತ್ರಿಕೆಗಳೇ ನಡೆಯುವುದಿಲ್ಲ, ಪತ್ರಿಕೆ ವಿತರಣೆ ಮಾಡುತ್ತಾಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನಜ್ಞಾನವನ್ನು ಗಳಿಸುತ್ತಾರೆ, ಮನೆ ಮನೆಗಳಿಗೆ ಹೋಗಿ ಪತ್ರಿಕೆ ಹಾಕುವ ಮೂಲಕ ವಿವಿಧ ಮನಃಸ್ಥಿತಿಯ ಜನರನ್ನುಅರ್ಥ ಮಾಡಿಕೊಂಡುಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ, ಎಲ್ಲಾ ನಮೂನೆಯ ಪತ್ರಿಕೆಗಳನ್ನು ಓದುತ್ತಾ ಪದವಿಗಳನ್ನು ಪಡೆಯಲು ಪೂರಕವಾಗಿ ಅನುಕೂಲವಾಗುತ್ತದೆ, ಪತ್ರಿಕೆ ವಿತರಣೆಯಿಂದಗಟ್ಟಿಯಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಅನೇಕರು ಪತ್ರಿಕೆ ವಿತರಣೆ ಮಾಡುತ್ತಾ ವಿದ್ಯಾಭ್ಯಾಸ ಮಾಡಿಉತ್ತಮ ಸ್ಥಾನಗಳಲ್ಲಿ ಇದ್ದಾರೆ, ಪತ್ರಿಕಾ ವಿತರಕ ವಿದ್ಯಾರ್ಥಿಗೆ ಸಂಘದಿಂದ ಸನ್ಮಾನ ಮಾಡಿರುವುದು ಶೈಕ್ಷಣಿಕ ಪ್ರೋತ್ಸಾಹವಾಗಿದೆ. ಪತ್ರಿಕೆ ವಿತರಕರಿಗೆ ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ರೀತಿಯಲ್ಲಿ ಕೆಲವು ಯೋಜನೆಗಳನ್ನು ಜಾರಿಗೆತಂದಿದೆ,ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರಗಳ ವಿರುದ್ಧ ಹೋರಾಡುವದು ಮತ್ತು ಮನವರಿಕೆ ಮಾಡುವ ಮೂಲಕ ಪತ್ರಿಕೆ ವಿತರಕರ ಸಂಘ ನಿರಂತರ ಮಾಡುವ ಪ್ರಯತ್ನಗಳಲ್ಲಿ ನಾವು ಎಲ್ಲರೂ ನಿಮ್ಮೊಂದಿಗಿದ್ದೇವೆಎಂದು ಬೆಂಬಲ ಸೂಚಿಸಿದರು.
ಅಖಿಲ ಕರ್ನಾಟಕ ಪತ್ರಿಕಾ ವಿತರಕರಕ್ಷೇಮಾಭಿವೃದ್ಧಿ ಸಂಘದಜಿಲ್ಲಾಅಧ್ಯಕ್ಷ ಗವಿರಾಜ್‌ಕಂದಾರಿ ಮಾತನಾಡಿ ಈ ಹಿಂದೆ ಉದಯ ಎಂಬ ಪತ್ರಿಕಾ ವಿತರಕನಿಗೆ ಐವತ್ತು ಸಾವಿರ ರೂಪಾಯಿಗಳು ಆರ್ಥಿಕ ಸಹಾಯಒದಗಿಸಲಾಗಿತ್ತು, ಈಗ ಶಿವನಗೌಡ ಅವರಿಗೆ ಮತ್ತು ಅನೇಕ ಪತ್ರಿಕೆ ವಿತರಕರಿಗೆ ಶೈಕ್ಷಣಿಕವಾಗಿ ಪ್ರೋತ್ಸಾ ನೀಡಲು ದಾನಿಗಳು ಮುಂದೆ ಬರಬೇಕುಎಂದುಕರೆ ನೀಡಿದರು. ಪತ್ರಕರ್ತ ಪ್ರಮೋದ್‌ಕುಲಕರ್ಣಿ,ಅಖಿಲ ಕರ್ನಾಟಕ ಪತ್ರಿಕಾ ವಿತರಕರಕ್ಷೇಮಾಭಿವೃದ್ಧಿ ಸಂಘದಜಿಲ್ಲಾಉಪಾಧ್ಯಕ್ಷ ಮಂಜುನಾಥ್‌ಟಪಾಲ್, ಕಾರ್ಯದರ್ಶಿ ಮಹೆಬೂಬ್ ಸಾಬ್‌ಜಿವಿಟಿ, ಪ್ರಿಯ ಸಲಹೆಗಾರ ವಿರುಪಾಕ್ಷಪ್ಪ ಮುರಳಿ, ನಾಗರಾಜ್‌ಕಲಾಲ್, ಸದಸ್ಯರಾದ ಮಹೆಬೂಬ್ ಮನಿಯಾರ, ಶಿವಕುಮಾರ್ ಜಿ, ಸೋಮವಾರದ್, ಹನುಮಂತ, ಮಂಜುನಾಥ್ ಹಡಪದ, ಗಂಗಾಧರ್ ಮಡ್ಡಿ, ಕಿರಣ್ ಮ,ಮದ್ಲಿ ಮುಂತಾದವರು ಉಪಸ್ಥಿತರಿದ್ದರು.