ಶಿರಗುಪ್ಪಿಯಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ

ಶಿರಗುಪ್ಪಿಯಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ New school room inaugurated in Shiraguppi

ಲೋಕದರ್ಶನ ವರದಿ 

ಕಾಗವಾಡ 04: ತಾಲೂಕಿನ ಶಿರಗುಪ್ಪಿ ಗ್ರಾಮದ ಸರ್ಕಾರಿ ಕನ್ನಡ/ಉರ್ದು ಪ್ರೌಢ ಶಾಲೆಯಲ್ಲಿ ಸನ್ 2023-24 ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿಎಂಎಸ್) ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಯನ್ನು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ವಿಜಯ ಅಕಿವಾಟೆ ಗುರುವಾರ ದಿ. 04 ರಂದು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮೂಖ್ಯೋಪಾಧ್ಯಾಯಕಿ ಉಜ್ವಲಾ ಮಗದುಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಕಿತಳೆ, ಅಧ್ಯಕ್ಷರು, ಕಾಗವಾಡ ಬ್ಲಾಕ್ ಸಂಪನ್ಮೂಲ ವ್ಯಕ್ತಿ  ಭರತ ಭೀಲವಡೆ, ಮುಖಂಡ ಭೀಮು ಅಕಿವಾಟೆ, ಗ್ರಾ.ಪಂ. ಕಾರ್ಯದರ್ಶಿ ಯಶವಂತ ವಂಟಗುಡೆ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.