ಪ್ರಕೃತಿ ನಮ್ಮ ಜೀವನದ ಭಾಗ ಮಾತ್ರವಲ್ಲ; ಅದು ನಮ್ಮ ಭವಿಷ್ಯ-ಸಿಇಓ ಭುವನೇಶ ಪಾಟೀಲ
Nature is not just a part of our lives; it is our future - CEO Bhuvanesh Patil
ಲೋಕದರ್ಶನ ವರದಿ
ಧಾರವಾಡ 06 : ಇಂದು ನಾವು ಪ್ರಕೃತಿಯನ್ನು ಹೇಗೆ ಕಾಪಾಡುತ್ತೇವೋ ಅದೇ ಭವಿಷ್ಯದ ಪೀಳಿಗೆಯ ಬದುಕನ್ನು ನಿರ್ಧರಿಸುತ್ತದೆ. ಪ್ರಕೃತಿಯನ್ನು ಹಾಳುಮಾಡಿದರೆ ಮುಂದಿನ ಪೀಳಿಗೆ ಎದುರಿಸಬಹುದಾದ ಕುಡಿಯುವ ನೀರಿನ ಕೊರತೆ, ಆಹಾರ ಸಮಸ್ಯೆ, ಹೆಚ್ಚಿದ ಬಿಸಿಲು, ಪ್ರಕೃತಿ ವಿಕೋಪಗಳು, ಜೀವ ವೈವಿಧ್ಯದ ನಾಶದಂತಹ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.
ತಾಲೂಕಿನ ಮಾರಡಗಿಯ ಎಸ್.ಜಿ.ಜಿ.ಬಿಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಧಾರವಾಡ ಗ್ರಾಮೀಣ ಇವರ ಸಹಯೋಗದಲ್ಲಿ ಏರಿ್ಡಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಮೈದಾನದಲ್ಲಿ ಸಸಿಯನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಇಂದು ಜಗತ್ತು ಹವಾಮಾನ ಬದಲಾವಣೆಯ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಮಾನವರ ಚಟುವಟಿಕೆಗಳಿಂದ ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚುತ್ತಿವೆ. ಅವುಗಳಲ್ಲಿ ಪ್ರಮುಖ ಹಸಿರುಮನೆ ಅನಿಲಗಳೆಂದರೆ ಕಾರ್ಬನ್‌ಡೈಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್. ಈ ಅನಿಲಗಳು ಉಷ್ಣವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದನ್ನೇ ಹಸಿರು ಮನೆ ಪರಿಣಾಮ ಎಂದು ಕರೆಯುವರು. ಇದರಿಂದಾಗಿ ಜಾಗತಿಕ ತಾಪಮಾನ ಏರಿಕೆ, ಸಮುದ್ರ ಮಟ್ಟ ಏರಿಕೆ, ಅತಿಯಾದ ಬಿಸಿಗಾಳಿ, ಪ್ರವಾಹಗಳು, ಬರ, ಹಿಮನದಿಗಳ ಕರಗುವಿಕೆ, ಕಾಡ್ಗಿಚ್ಚುಗಳು ಹೀಗೆ ಹಲವಾರು ಸಮಸ್ಯೆಗಳು ಉದ್ಭವವಾಗುತ್ತಿವೆ.
ಹವಾಮಾನ ರಕ್ಷಿಸಲು ಮರಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್ ಉಳಿಸುವುದು, ಸೌರ ಮತ್ತು ಪವನ ಶಕ್ತಿ ಬಳಕೆ ಹಾಗೂ ಪರಿಸರ ಸ್ನೇಹಿ ಜೀವನಶೈಲಿ ಅನುಸರಿಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಪ್ರಕೃತಿ ನಮ್ಮ ಜೀವನದ ಭಾಗ ಮಾತ್ರವಲ್ಲ; ಅದು ನಮ್ಮ ಭವಿಷ್ಯ ಎಂದರು. ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಕ್ಕಳೊಂದಿಗೆ ಸಹ ಭೋಜನದೊಂದಿಗೆ ಮಧ್ಯಾಹ್ನದ ಬಿಸಿ ಊಟವನ್ನು ಸವಿದರು.
ಸಹಾಯಕ ಸಂರಕ್ಷಣಾಧಿಕಾರಿ ಮಹೇಶ್ ಹಿರೇಮಠ ಗಣ್ಯಮಾನ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿಯವರು ಶಾಲಾ ಮೈದಾನದಲ್ಲಿ ನೆಟ್ಟಿರುವ ಗಿಡಗಳನ್ನು ಮಕ್ಕಳು ರಕ್ಷಿಸಬೇಕು ಎಂದರು.
ಮಾರಡಗಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶಾನವಾಡ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಮಾಜಿಕ ಅರಣ್ಯ ವಿಭಾಗ ಧಾರವಾಡ ಡಾ. ಶಿವಕುಮಾರ್, ಗಂಗಾಧರ್ ಕಂದುಕೂರ, ಕಾರ್ಯ ನಿರ್ವಹಣಾ ಅಧಿಕಾರಿ ತಾಲೂಕು ಪಂಚಾಯತ್ ಧಾರವಾಡ ಉಪಸ್ಥಿತರಿದ್ದರು. ತಿಂಗಳ ಹಕ್ಕಿ ಲೋಕ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನೀಡುವುದರ ಜೊತೆಗೆ ಚಿತ್ರಕಲಾ ಸ್ಪರ್ಧೆ ಏರಿ್ಡಸುವುದರ ಮೂಲಕ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಕೀರ್ಪ ಕಾಲವಾಡ ಎಸ್‌ಡಿಎಮ್ ಸಿ ಅಧ್ಯಕ್ಷರು ವಹಿಸಿಕೊಂಡಿದ್ದರು ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷರಾದಂತಹ ಚಂದ್ರಶೇಖರ ಮಟ್ಟಿ, ಹನುಮಂತಪ್ಪ ಮಾರಡಗಿ ಹಾಗೂ ಎಲ್ಲ ಸದಸ್ಯರು, ಭೂದಾನಿಗಳಾದ ಶಿವರಾಜ್ ಬಳ್ಳಾರಿ, ಅಜಿತ್ ದೇಸಾಯಿ, ಪಿಡಿಓ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮಿ ಅರ್ಕಸಾಲಿ ವಂದನಾರೆ್ಣಯನ್ನು ಮಾಡಿದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 