ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಲಸಿಕಾ ಅರಿವು ಕಾರ್ಯಕ್ರಮ
National Vaccination Awareness Program at Lakkundi Primary Health Center
ಲೋಕದರ್ಶನ ವರದಿ
ಮಕ್ಕಳಿಗೆ ಮಾರಕ ರೋಗಗಳು ಬರದಂತೆ ಲಸಿಕೆಯನ್ನು ಹಾಕಿಸಿರಿ : ರೂಪಸೇನ್ ಚವ್ಹಾಣ
ಗದಗ 28 : ತಾಯಿ ಮಗುವಿನ ಆರೋಗ್ಯಕ್ಕೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ತಂದಿದ್ದು ಅದರಲ್ಲಿ 12 ರೋಗಗಳ ವಿರುದ್ಧ ಉಚಿತ (ವ್ಯಾಕ್ಷಿನೇಷನ್ ) ಲಸಿಕೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಲಸಿಕಾ ಕಾರ್ಯಕ್ರಮವನ್ನು ನಡೆಸಿ ತಾಯಿ ಮಗುವಿನ ಆರೋಗ್ಯ ವೃದ್ದಿಗೆ ಶ್ರಮಿಸುತ್ತಿದೆ. ಎಲ್ಲಾ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆಯನ್ನು ಹಾಕಿಸಿ ಅದರ ಸದುಪಯೋಗವನ್ನು ಪಡೆಯಬೇಕು ಮತ್ತು ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು ಎಂದು ಜಿಲ್ಲಾ ಆರೋಗ್ಯ ಶಕ್ಷಣಾಧಿಕಾರಿಗಳಾದ ರೂಪಸೇನ್ ಚವ್ಹಾಣ ಹೇಳಿದರು .
ಅವರು ಕರ್ನಾಟಕ ಜಿಲ್ಲಾ ಆಡಳಿತ. ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಾಲಯ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ .ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಏರಿರಿ್ಡಸಲಾಗಿದ್ದ ಲಸಿಕಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ
ಅವರು ಮಕ್ಕಳಿಗೆ - ಜನನದಿಂದ 16 ವರ್ಷ: ವಯಸ್ಸಿನವರಿಗೆ ಲಸಿಕೆಯನ್ನು ಮಾರಕರೋಗಗಳು ಬಾರದಂತೆ ತಡೆಗಟ್ಟುವ ಸಲುವಾಗಿ ಹುಟ್ಟಿದಾಗ ಬಿಸಿಜಿ,ಒಪಿವಿ,- ಹೆಪಟೈಟಿಸ್-ಬಿ-ಮತ್ತು ಕ್ಷಯ, ಪೋಲಿಯೋ, ಹೆಪಟೈಟಿಸ್-ಬಿ ಲಸಿಕೆಯನ್ನು ನೀಡಲಾಗುತ್ತದೆ ಮತ್ತು 6, 10, 14 ವಾರ ಪೆಂಟಾ,ಒಪಿವಿ,ರೋಟಾ,ಪಿಸಿವಿ ಲಸಿಕೆಯನ್ನು ಡಿಫ್ತೀರಿಯಾ, ನ್ಯುಮೋನಿಯಾ, ಅತಿಸಾರಕ್ಕೆ ಮತ್ತು 9-12 ತಿಂಗಳು ಎಂ.ಆರ್1,ಜೆಇ1,ಪಿಸಿವಿ ಬೂಸ್ಟ ಲಸಿಕೆಯನ್ನು ದಡಾರ-ರುಬೆಲ್ಲಾ, ಜಪಾನೀಸ್ ಎನ್ಸೆಫಲೈಟಿಸ್ ನೀಡಲಾಗುವುದು ಮತ್ತು 16-24 ತಿಂಗಳು ಎಂಆರ್2,ಡಿಪಿಟಿ ಬೂಸ್ಟರ್, ಒಪಿವಿ ಲಸಿಕೆಯನ್ನು ದಡಾರ, ಗಂಟಲುಮಾರಿ ಬರದಂತೆ ತಡೆಗಟ್ಟಲು ಮತ್ತು 5-6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆಯನ್ನು ಗಂಟಲುಮಾರಿ, ನಾಯಿಕೆಮ್ಮು ಮತ್ತು , 10 ವರ್ಷ ಟಿಡಿ ಧನುರ್ವಾಯು 16 ವರ್ಷ ಟಿಡಿ ಧನುರ್ವಾಯು,ಲಸಿಕೆಗಳನ್ನು ನೀಡಲಾಗುವುದು,
ಮತ್ತು ಗರ್ಭಿಣಿಯರಿಗೆ ಟಿಡಿ1,ಟಿಡಿ2, ಟಿಡಿ-ಬೂಸ್ಟರ್-ಧನುರ್ವಾಯು ತಡೆಗಟ್ಟಲು ನೀಡಲಾಗುವುದು ಎಂದು ಹೇಳಿದರು. ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಮಾತನಾಡಿ ಯಾವುದೇ ಮಗು ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರು ಪ್ರತಿ ಗುರುವಾರ ಲಕ್ಕುಂಡಿ, ಮತ್ತು ಎಲ್ಲಾ ಉಪಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಏರಿ್ಡಸಲಾಗುತ್ತದೆ ಲಸಿಕ ಕೇಂದ್ರಕ್ಕೆ ಬೆಳಿಗ್ಗೆ 10 ಗಂಟೆಗೆ ಇಂದ 12 ಗಂಟೆಯ ಒಳಗಾಗಿ ಬಂದು ಲಸಿಕೆಯನ್ನು ಪಡೇದು ಮಾರಕರೋಗಗಳನ್ನು ತಡೆಗಟ್ಟಿರಿ ಆರೋಗ್ಯ ಸಂಪತ್ತು ಪಡೆಯಿರಿ ಎಂದು ಹೇಳಿದರು
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 