ಭವ್ಯ ಭಾರತ ನಿಮಾರ್ಣದ ನಿರ್ಮಾತೃ ಶಿಕ್ಷಕರು: ಡಾ.ಮಂಜುನಾಥ.ಬಿ.ಕೋರಿ
National Teachers' Day program: Vijayapur
ವಿಜಯಪುರ 08: ವಿದ್ಯಾರ್ಥಿಗಳು ತಮಗೆ ಜ್ಞಾನ ನೀಡಿದ ಶಿಕ್ಷಕರನ್ನು ಸ್ಮರಿಸಿ ಗೌರವಿಸುವುದರ ಜೊತೆಗೆ ಅವರ ಮಾರ್ಗದರ್ಶನ ಪಡೆದಲ್ಲಿ ನೀವು ಜಗತ್ತು ಬೆಳಗುವ ತಾರೆಗಳಾಗುತ್ತೀರಿ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಜೆಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ.ಬಿ.ಕೋರಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಶಿಕ್ಷಣಶಾಸ್ತ್ರ ಹಾಗೂ ಇತಿಹಾಸ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗೆ ಬಂದ ಮಗುವನ್ನು ಕೈ ಹಿಡಿದು ದಡ ಸೇರಿಸುವ ಅವರ ಬದುಕು ಬೆಳಗಿಸುವ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿಕ್ಷಕ. ಶಿವ ಪಥವನ್ನು ಅರಿಯಬೇಕಾದರೆ ನಮ್ಮ ಜೊತೆ ಗುರು ಇರಬೇಕು. ಮುಂದೆ ಗುರಿ, ಹಿಂದೆ ಗುರು ಇದ್ದರೆ ಅಸಾಧ್ಯವಾದದ್ದನ್ನು ಸುಲಭ ಸಾಧ್ಯವಾಗಿಸಬಹುದು ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, ಸಾವಿರಾರು ಮಂದಿರ್ ಮಸೀದಿ ಚರ್ಚ ಕಟ್ಟುವ ಬದಲು ಒಂದು ಶಾಲೆಯನ್ನು ಕಟ್ಟಿ ಆ ಶಾಲೆ ಸಾವಿರ-ಸಾವಿರ ಮಕ್ಕಳ ಬದುಕು ಬೆಳಗುತ್ತದೆ ಎಂದು ಹೇಳಿದ್ದಾರೆ ಅವರ ಮಾತು ಸತ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಪಿಸಿಕೊಳ್ಳಬೇಕು. ನಮ್ಮ ಮನೆ ಅಕ್ಕ-ಪಕ್ಕ ಸ್ವಚ್ಛತೆ ಇಟ್ಟುಕೊಂಡು ಸಸಿಗಳನ್ನು ನೆಡಬೇಕು. ನಾವು ಮಾಡುವ ಕೆಲಸ ಇತರರಿಗೂ ಮಾದರಿಯಾಗಬೇಕು.
ಶಿಕ್ಷಕ ವೃತ್ತಿ ಸರಳವಾದದ್ದು ಅಲ್ಲ, ದೇಶದ ಕಟ್ಟುವ ಪ್ರಜೆಗಳ ನಿರ್ಮಾಣ ಮಾಡುವ ಪವಿತ್ರವಾದ ಕೆಲಸ ಶಿಕ್ಷಕನದ್ದು, ಶಿಕ್ಷಕ ಒಬ್ಬ ಹೀರೊ, ಒಬ್ಬ ಮಾರ್ಗದರ್ಶಕ. ಮಕ್ಕಳು ಶಿಕ್ಷಕರನ್ನೇ ಅನುಸರಿಸುತ್ತೇವೆ. ಶಿಕ್ಷಕರು ಅತ್ಯಂತ ಜಾಗ್ರತೆಯಿಂದ ಇರಬೇಕು. ಕಾರಣ ನಮ್ಮನ್ನು ಅನುಸರಿಸುವವರು ಯಾವುದೇ ತಪ್ಪುಗಳನ್ನು ಮಾಡಬಾರದು ಎಂದು ಶಿಕ್ಷಕರಿಗೆ ಕಿವಿ ಮಾತು ಎಂದರು.
ಓರ್ವ ಶಿಕ್ಷಕ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಂಡರೆ ಆತ ದೇವರಿಗಿಂತಲೂ ದೊಡ್ಡ ಶಕ್ತಿ ಕೊಡುತ್ತಾನೆ. ಶಿಕ್ಷಣ ನಮ್ಮ ಬದುಕು ರೂಪಿಸುವ ಅಸ್ತ್ರ, ಅಂತಹ ಅಸ್ತ್ರವನ್ನು ಶಿಕ್ಷಕ ನಮಗೆ ಧಾರೆಯೆರೆಯುತ್ತಾರೆ. ದೇವರ ವರ ಕೊಟ್ಟರೆ ನಮ್ಮ ಬದುಕು ಬಂಗಾರವಾಗುತ್ತದೋ ಇಲ್ಲವೋ ಆದರೆ ಶಿಕ್ಷಕ ನಮಗೆ ವರ ಕೊಟ್ಟರೆ ಬದುಕು ಬಂಗಾರವಾಗುತ್ತದೆ ಎಂದರು.
ನಿಮ್ಮಲ್ಲಿ ಶಿಕ್ಷಣ ಇದ್ದರೆ ಸಾಕು ಜಗತ್ತಿನ ಯಾವ ಜಾಗದಲ್ಲೂ ನೀವು ಲಂಚ ನೀಡುವ ಅವಶ್ಯಕತೆ ಇಲ್ಲ. ಶಿಕ್ಷಣ ಬಹುದೊಡ್ಡ ಶಕ್ತಿ. ಆ ಶಕ್ತಿ ಕೊಡಲು ಶಿಕ್ಷಕ ಬೇಕು. ನೀವು ನಿಮ್ಮ ಗುರಿ ಮುಟ್ಟಿ ದಡ ಸೇರಬೇಕಾದರೆ ಶಿಕ್ಷಕರನ್ನು ಮರೆಯಬಾರದು. ನಿಮ್ಮ ಸಾಧನೆಗೆ ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಅವಶ್ಯ. ಎಲ್ಲ ವೃತ್ತಿಗಿಂತಲೂ ಪವಿತ್ರವಾದದ್ದು ಶಿಕ್ಷಕ ವೃತ್ತಿ.
ಈ ವೇಳೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ, ಇಂದು ಶಿಕ್ಷಕರ ಜವಾಬ್ದಾರಿ ಹೆಚ್ಚಾಗುತ್ತಿದೆ. ಒತ್ತಡದ ನಡುವೆಯೂ ನಾವು ವಿದ್ಯಾರ್ಥಿಗಳಿಗೆ ಶಿಕ್ಷಣ, ಮಾರ್ಗದರ್ಶನ ನೀಡಿ ಅವರ ಬದುಕು ಬದಲಾಯಿಸುವ ಕೆಲಸ ಮಾಡುತ್ತಿದ್ದೇವೆ. ಕಠಿಣ ಪರಿಶ್ರಮ, ಶ್ರದ್ದೆ ಹಾಗೂ ಉನ್ನತ ಗುರಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನವ ಭಾರತ ನಿರ್ಮಾಣ ಮಾಡುವ ಉತ್ತಮ ನಾಗರಿಕರಾಗಬೇಕು.
ಯುವ ಭಾರತ ಬಹಳಷ್ಟು ಗಟ್ಟಿಯಾಗಬೇಕು. ದೇಶದ ಭವಿಷ್ಯ ಕಟ್ಟುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರು ಯುವಭಾರತ ನಿರ್ಮಾಣದ ಶಿಲ್ಪಿಗಳು. ವಿದ್ಯಾರ್ಥಿಗಳು ತಮ್ಮನ್ನು ದೇಶದ ಉತ್ತಮ ನಾಗರೀಕರನ್ನಾಗಿ ರೂಪಿಸಿದ ಶಿಕ್ಷಕರಿಗೆ ಹಾಗೂ ಶಾಲೆಗೆ ಗೌರವ ತಂದು ಕೊಡಬೇಕು ಎಂದು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ.ಎಚ್.ದೊಡಮನಿ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆ ಹಾಗೂ ಪರಿಸ್ಥಿತಿ ಕುರಿತು 12 ನೇ ಶತಮಾನದಲ್ಲಿಯೇ ಶರಣ ಅಲ್ಲಮ ಪ್ರಭುಗಳು ಅಂದೆ ಭವಿಷ್ಯ ನುಡಿದಿದ್ದಾರೆ. ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಗಳ ಶೈಕ್ಷಣಿಕ, ಮಾನಸಿಕ ಹಾಗೂ ದೈಹಿಕ ವಿಚಾರಗಳು ಸೇರಿದಂತೆ ಸವಾಂರ್ಗಿಣ ಅಭಿವೃದ್ಧಿಗೆ ಗಮನ ನೀಡುತ್ತೇವೆ. ಶಿಕ್ಷಣ ಹಾಗೂ ಶಿಕ್ಷಕ ಒಂದು ನಾಣ್ಯದ ಎರಡು ಮುಖಗಳು. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥೀಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು ಹಾಗೂ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ನಿದೆೇರ್ಶಕ ಡಾ.ಪಿ.ಎಸ್.ಪಾಟೀಲ,ನ್ಯಾಕ್ ಸಂಯೋಜಕ ಡಾ.ಮಹೇಶಕುಮಾರ ಕೆ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಐ ಎಸ್. ಹೂಗಾರ, ಡಾ.ಗೀರೀಶ ಹಣಮರೆಡ್ಡಿ, ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜೆ.ಬಿ ಬಿರಾದಾರ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ,ಡಾ.ತರನ್ನುಮ್ ಜಬೀನ್‌ಖಾನ, ಪ್ರೊ.ರೂಪಾ ಮೋಟಗಿ, ಪ್ರೊ.ರೇಣುಕಾದೇವಿ ಕಮತರ,ಪ್ರೊ.ಶ್ರೀಧರ ಜೋಶಿ,ಡಾ.ಉಷಾದೇವಿ ಹಿರೇಮಠ,ಡಾ.ಎಂ.ಬಿ ಪಾಟೀಲ,ಪ್ರೊ.ಭಾರತಿ ಕಾರಕಲ,ಡಾ.ರಾಜೇಶ್ವರಿ ಪುರಾಣಿಕ,ಪ್ರೊ.ಸವಿತಾ ಕನಕರೆಡ್ಡಿ,ಪ್ರೊ.ಅಕ್ಷಯ ಜನಾಯ್,ಡಾ.ಮಂಜುನಾಥ ಜ್ಯೋತಿ,ಡಾ.ಎಸ್ ಎಂ ಉಂಕಿ,ಡಾ.ಎಸ್ ಡಿ ಲಮಾಣಿ,ಡಾ.ಅಮಿತ ತೇರದಾಳೆ,ಡಾ.ಧಾನೇಶ್ವರಿ ಮೂಲಿಮನಿ,ಪ್ರೊ ವಿದ್ಯಾ ಪಾಟೀಲ, ಪ್ರೊ.ಮಲಿಕ್ ಎಲ್ ಜಮಾದಾರ, ಡಾ.ರಾಮಚಂದ್ರ ನಾಯಕ,ಪ್ರೊ.ಆರ್ ಡಿ. ಜೋಶಿ,ಪ್ರೊ.ಎಂ.ಎಸ್ ಜೇವೂರ,ಪ್ರೊ.ಮಾಲತಿ ಚನಗೊಂಡ, ಡಾ.ಧರ್ಮಗುರು ಪ್ರಸಾದ, ಪ್ರೊ.ಎಸ್ ವಾಯ್ ಅಂಗಡಿ, ಪ್ರೊ.ಅನೀಶ ಜಮಖಂಡಿ ಪ್ರೊ.ಶರಣಗೌಡ ಪಾಟೀಲ,ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೊ.ಐ ಎಸ್ ಹೂಗಾರ ಸ್ವಾಗತಿಸಿದರು,ಪ್ರೊ.ಸಿ.ಎನ್ ಕುನ್ನೂರ ಕಾರ್ಯಕ್ರಮ ನಿರೂಪಿಸಿದರು, ಪ್ರೊ.ಜೆ.ಬಿ ಬಿರಾದಾರ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 