ಎನ್‌ಎಸ್‌ಎಸ್ ದಿನಾಚರಣೆ: ಸ್ವಚ್ಛತಾ ಕಾರ್ಯಕ್ರಮ

  ಎನ್‌ಎಸ್‌ಎಸ್ ದಿನಾಚರಣೆ: ಸ್ವಚ್ಛತಾ ಕಾರ್ಯಕ್ರಮ NSS Day Celebration: Cleanliness Drive

ಲೋಕದರ್ಶನ ವರದಿ 

 ಯಮಕನಮರಡಿ 25: ಸ್ಥಳೀಯ ಸಿಇಎಸ್ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕ  ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳು ಹಾಗೂ ಕಾಲೇಜು ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎ.ಬಿ. ನಾಯಿಕ ಅವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮಾಧಿಕಾರಿ ಎಂ.ಐ. ಮಠಪತಿ ಅವರೊಂದಿಗೆ ಕಾಲೇಜಿನ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಕುಮಾರಿ ಮಹಾನಂದಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರವಣಾ ಕರಿಗಾರ ವಂದಿಸಿದರು.