ಸಂಗೀತ ಸಂಜೆ ಕಾರ್ಯಕ್ರಮ
Musical evening program
ಧಾರವಾಡ 06 : ದಿ. ಡಾ. ಸುಲಭಾದತ್ತ ನೀರಲಗಿ ಅವರು ಸಂಗೀತ ಸೇವೆಯನ್ನು ಒಂದು ತಪಸ್ಸು ಎಂದು ತ್ರಿಕರಣ ಶುದ್ಧಿಯಿಂದ ಮಾಡಿದ ಮಹಾನ್ ಸಾಧಕರು ಎಂದು ಹಿರಿಯ ಹಿಂದುಸ್ಥಾನಿ ಸಂಗೀತಗಾರರಾದ ಪಂ. ಎಂ. ವೆಂಕಟೇಶಕುಮಾರ ಅಭಿಪ್ರಾಯಪಟ್ಟರು. ಅವರು, ಕ.ವಿ.ವ ಸಂಘವು ಡಾ. ಸುಲಭಾದತ್ತ ನೀರಲಗಿ ದತ್ತಿ ಅಂಗವಾಗಿ ಅವರು 71 ನೇ ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಡಾ. ಸುಲಭಾದತ್ತ ನೀರಲಗಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಹಿನ್ನೆಲೆಯ ಮನೆತನದಿಂದ ಬಂದವರಾಗಿದ್ದರಿಂದ ಸಹಜವಾಗಿ ಅವರಲ್ಲಿ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇತ್ತು. ಡಾ. ಸುಲಭಾದತ್ತರ ಹಾಡುಗಳಲ್ಲಿ ಡಾ. ಗಂಗೂಬಾಯಿ ಹಾನಗಲ್ಲ ಅವರ ಪ್ರಭಾವ ಕಾಣುತ್ತಿತ್ತು. ಇಂದು ದತ್ತ ದಂಪತಿಗಳಿಲ್ಲದಿರುವುದೇ ವಿಷಾದನೀಯ. ಡಾ. ಸುಲಭಾದತ್ತ ನೀರಲಗಿಯವರ ಮಕ್ಕಳು ತಾಯಿಯ ಹೆಸರು ಚಿರಸ್ಥಾಯಿಯಾಗಿರಲೆಂದು ಕ.ವಿ.ವ.ಸಂಘದಲ್ಲಿ ದತ್ತಿ ಇರಿಸಿ ಅವರನ್ನು ಜೀವಂತವಾಗಿರಿಸಿದ್ದಾರೆ. ಅವರ ಅಭಿಮಾನಿಗಳು ಅವರ ಹೆಸರಿನಿಂದ ವರ್ಷದಲ್ಲಿ ಎರಡು-ಮೂರು ಕಾರ್ಯಕ್ರಮ ಆಯೋಜಿಸಿ ಸ್ಮರಿಸುವಂತಾಗಲಿ ಎಂದರು.
ಮಾಜಿ ಮಹಾಪೌರರಾದ ಡಾ. ಹನುಮಂತ ಡಂಬಳ ಮಾತನಾಡಿ, ದಿ. ಡಾ. ಸುಲಭಾದತ್ತ ಅವರ ಜೀವನದ ಉಸಿರೇ ಸಂಗೀತವಾಗಿತ್ತು. ಜೀವನದ ಕೊನೆಯವರೆಗೂ ಸಂಗೀತದಲ್ಲಿ ಅಪಾರ ಉತ್ಸಾಹ ಕಾರ್ಯಕ್ಷಮತೆ ಹೊಂದಿದ್ದರು. ಅವರ ಸಾಧನೆಗೆ ಪತಿ ದತ್ತ ನೀರಲಗಿಯವರ ಪ್ರೇರಣೆಯೂ ಮುಖ್ಯವಾಗಿತ್ತು. ಈ ಸಂಗೀತ ಪರಂಪರೆ ಉಳಿಸಿ, ಬೆಳೆಸುವುದಕ್ಕಾಗಿಯೇ ಸಂಗೀತ ಕಾರ್ಯಕ್ರಮ ನಡೆಸಲು ಸಭಾಭವನ ಕಟ್ಟಿಸಿ ಉದಯೋನ್ಮುಖ ಸಂಗೀತ ಕಲಾವಿದರನ್ನು ಬೆಳೆಸಿದರು. ಆ ಇಬ್ಬರೂ ದಂಪತಿಗಳ ಅಕಾಲಿಕ ನಿಧನ ನಮಗೆ ತುಂಬಲಾರದ ಹಾನಿ ಎಂದು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಸುಲಭಾದತ್ತ ನೀರಲಗಿ ಅವರ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಕನಸು ನನಸಾಗದೇ ಇರುವುದು ವಿಷಾದನೀಯ. ಮದುವೆ ನಂತರವೂ ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಸ್ಮರಣೀಯ ಎಂದರು.
ಡಾ. ಸುಲಭಾದತ್ತ ನೀರಲಗಿಯವರ ಸ್ಮರಣೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಡಾ. ಶ್ರೀಧರ ಕುಲಕರ್ಣಿ ಹಾಗೂ ಶ್ರೀಮತಿ ಶೃತಿ ಕುಲಕರ್ಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇವರಿಗೆ ವಿನೋದ ಪಾಟೀಲ, ಪ್ರಸಾದ ಮಡಿವಾಳರ ಸಾಥ್ ನೀಡಿದರು. ಗೋಕಾಕದ ನಟರಾಜ ಮಹಾಜನ ಅವರು ಮೂಗಿನಿಂದ ಶಹನಾಯಿ ವಾದನ ನುಡಿಸಿ ಪ್ರೇಕ್ಷಕರನ್ನು ರಂಜಿಸಿದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 