ರೌಡಿ ಶೀಟರ್ ಭೀಮನಗೌಡ ಬಿರಾದಾರ ಬರ್ಬರ ಹತ್ಯೆ: ಕರ್ತವ್ಯಲೋಪದಡಿ ಪಿಎಸ್‌ಐ ಅಮಾನತ್ತು
Murder of Rowdy sheeter Bhimanagowda
ಚಡಚಣ 06: ಸಮೀಪದ ದೇವರನಿಂಬರಗಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ರೌಡಿ ಶೀಟರ್ ದೇವರನಿಂಬರಗಿ ಗ್ರಾ.ಪಂ. ಅಧ್ಯಕ್ಷ ಭೀಮನಗೌಡ ಕಲ್ಲನಗೌಡ ಬಿರಾದಾರ (40) ಮೇಲೆ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಭೀಮನಗೌಡ ಬೆಳಿಗ್ಗೆ ಸುಮಾರು 8. 50 ಗಂಟೆಗೆ ಗ್ರಾಮದ ಶ್ರೀಮಂತ ಭೀಮಾಶಂಕರ ನಾವಿ ಎಂಬುವವರ ಸಲೂನಿಗೆ ಕಟಿಂಗ್ ಮಾಡಿಸಿಕೊಳ್ಳಲೆಂದು ತೆರಳಿದಾಗ ನಾಲ್ಕು ಜನ ಅಪರಿಚಿತ ಮುಸುಕುಧಾರಿಗಳು ಸಲೂನಿಗೆ ನುಗ್ಗಿ ಮೃತ ಭೀಮನಗೌಡನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿ, ಪರಾರಿಯಾಗಿದ್ದರು. ದುಷ್ಕರ್ಮಿಗಳಾದ ರಜೀವುಲ್ಲಾ ಮಕಾನದಾರ್, ವಾಸೀಂ ಮನಿಯಾರ್, ಪಿರೋಜ್ ಶೇಖ್ ಮತ್ತು ಮೌಲಾಸಾಬ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನಲೆ : ಮೃತ ಭೀಮನಗೌಡ ಬಿರಾದಾರ ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಂಡು ತನ್ನ ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯ ಜೊತೆಗೆ ಜೀವನ ನಡೆಸುತ್ತಿದ್ದು, ಈ ಮೊದಲು ಈತನ ಮೇಲೆ ಚಡಚಣ ಪೊಲೀಸ್ ಠಾಣೆಯಲ್ಲಿ ರೌಡೀಶೀಟರ್ ದಾಖಲಾಗಿದೆ. ನಂತರ 2019ರಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ, ದೇವರನಿಂಬರಗಿ ಗ್ರಾ.ಪಂ. ಅಧ್ಯಕ್ಷನಾಗಿದ್ದು, ಗ್ರಾಮದ ಕೆಲ ವ್ಯಕ್ತಿಗಳ ಜೊತೆಗಿನ ಸರಕಾರಿ ಕೆಲಸದ ವಿಷಯವಾಗಿ ಇದ್ದ ವೈಷಮ್ಯವೆ ಈ ಘಟನೆಗೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೀಗ ಇಂತಹ ಗಂಭೀರ ಪ್ರಕರಣವನ್ನು ತಡೆಯುವಲ್ಲಿ ವಿಫಲರಾದ ಆರೋಪದ ಮೇಲೆ ಸ್ಥಳೀಯ ಪಿಎಸ್‌ಐ ಪ್ರವೀಣ್ ಅವರನ್ನು ಕರ್ತವ್ಯಲೋಪದಡಿ ಸಸ್ಪೆಂಡ್ ಮಾಡಲಾಗಿದೆ. ಈ ಹಿಂದೆ, ಭೀಮನಗೌಡ ಬಿರಾದಾರ್ ಹತ್ಯೆಗೆ ಭೀಮಾತೀರದ ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್‌ಗೆ ಸಂಬಂಧವಿರಬಹುದೆಂದು ಶಂಕೆ ವ್ಯಕ್ತವಾಗಿತ್ತು. ಇತ್ತೀಚೆಗೆ ಕಾರಾಗೃಹದಿಂದ ಹೊರಬಂದಿದ್ದ ವಿಜಯಪುರದ ಮತ್ತೊಬ್ಬ ಅಪರಾಧಿ ಸಹ ಭೀಮನಗೌಡ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ಆಂತರಿಕ ಮಾಹಿತಿ ಇತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ, ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಕೊಲೆಯ ಹಿಂದೆ ಇರುವ ದೊಡ್ಡ ಮಟ್ಟದ ಪಿತೂರಿಯನ್ನು ಭೇದಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 