ಮುಕುಟ ಸಪ್ತಮಿ ಆಚರಣೆ

ಮುಕುಟ ಸಪ್ತಮಿ ಆಚರಣೆ  Mukuta Saptami Celebration


ಹೂವಿನಹಡಗಲಿ, ಆ.20: ಪಟ್ಟಣದ ಪಾರ್ಶ್ವನಾಥ ದಿಗಂಬರ ಜೈನ ಬಸದಿ ವತಿಯಿಂದ ಶ್ರಾವಣ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನವನ್ನು ಮುಕುಟ ಸಪ್ತಮಿಯಾಗಿ ಭಕ್ತಿಭಾವದಿಂದ ಆಚರಿಸಲಾಯಿತು.  

ಈ ಅಂಗವಾಗಿ ಜಿನಬಸದಿಯಲ್ಲಿ ಪಂಚಾಮೃತ ಅಭಿಷೇಕ, ಜಿನಗುಣ ಸಂಪತ್ತಿ ಆರಾಧನೆ ಹಾಗೂ ಶ್ರೀ ಜಿನೇಶ್ವರರ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ಭಕ್ತರು ಭಗವಂತರಿಗೆ ನಿರ್ವಾಣ ಲಾಡು ಅರ​‍್ಿಸುವ ಮೂಲಕ ಭಕ್ತಿ ಸಮರ​‍್ಿಸಿದರು.  

ಈ ಸಂದರ್ಭದಲ್ಲಿ ದಿಗಂಬರ ಜೈನ ಸಮಾಜದ ಅಧ್ಯಕ್ಷ ಪ್ರಶಾಂತ್ ಎಚ್‌.ಎಸ್‌. ಮಾತನಾಡಿ, ಧಾರ್ಮಿಕ ಆಚರಣೆಗಳನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ನಿರಂತರವಾಗಿ ಆಚರಿಸುವುದರ ಜೊತೆಗೆ, ನಿಷ್ಕಲ್ಮಷ ಮನಸ್ಸಿನಿಂದ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅನ್ಯ ಧರ್ಮೀಯರೊಂದಿಗೆ ಸೌಹಾರ್ದ ಹಾಗೂ ಸಹಕಾರದ ಮನೋಭಾವದಿಂದ ನಡೆದುಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.  

ಜ್ವಾಲಾಮಾಲಿನಿ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ ಎಂ.ಡಿ., ಚಂಪಾ ರಾಯಪ್ಪ, ಜಯಶ್ರೀ ಎಂ. ಜೈನ್, ವಿಜಯನಗರ ಕೆಜೆಎ ನಿರ್ದೇಶಕ ಸಂತೋಷ್ ಜೈನ್, ಅಮಿತ್, ಪಾರ್ಶ್ವನಾಥ ರೇವಡಿ, ನಾಗರಾಜ ದಾಸನಹಳ್ಳಿ, ವಿಜಯಕುಮಾರ್ ಜೈನ್, ಪದ್ಮರಾಜ್ ಜೈನ್ ಸೇರಿದಂತೆ ಪಟ್ಟಣದ ಜೈನ ಬಾಂಧವರು ಭಾಗವಹಿಸಿದ್ದರು.  ಶೀತಲ್ ಪಂಡಿತ್ ಅವರ ನೇತೃತ್ವದಲ್ಲಿ ಪೂಜಾ ಮಹೋತ್ಸವ ನಡೆಯಿತು.