ಚಿಕ್ಕೋಡಿ

ಭೂಮಿ ತಾಯಿಯ ರಕ್ಷಣೆ ಕಣ್ಗಾವಲು ಸಮಿತಿ ಸಭೆ

ಭೂಮಿ ತಾಯಿಯ ರಕ್ಷಣೆ ಕಣ್ಗಾವಲು ಸಮಿತಿ ಸಭೆ

ಮಾಂಜರಿ 07: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಚಿಕ್ಕೋಡಿ ವತಿಯಿಂದ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ  ಕಬ್ಬು ಸಂಶೋಧನಾ ಕೇಂದ್ರದಲ್ಲಿ ಗುರುವಾರ ರಂದು  ಕಾರ್ಖಾನೆ ಮತ್ತು ಕೃಷಿ ಇಲಾಖೆ ಚಿಕ್ಕೋಡಿ ಸಂಯೋಗದಲ್ಲಿ ಭೂಮಿ ತಾಯಿಯ ರಕ್ಷಣೆ ಕಣ್ಗಾವಲು ಸಮಿತಿ ಸಭೆ ಆಯೋಜಿಸಲಾಯಿತು ಈ ಸಭೆಯಲ್ಲಿ  ಕೃಷಿ ಇಲಾಖೆಯ ಕೃಷಿ ಅಧಿಕಾರಿ ಪ್ರಶಾಂತ್ ಮುಳ್ಳಿಮನಿ ಮುಖ್ಯ ಅತಿಥಿಯಾಗಿ  ಪಾಲ್ಗೊಂಡಿದ್ದರು 

ಈ ವೇಳೆ  ಅವರು ಮಾತನಾಡಿ ಸದ್ಯ ದಿನಗಳಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಮಣ್ಣಿನ ಮೇಲೆ ಆಗುತ್ತಿರುವ ಹಾನಿಯ ಬಗ್ಗೆ ಮತ್ತು ಅದರ ಕಾಪಾಡಿಕೊಳ್ಳುವ ಬಗ್ಗೆ ಹಾಗೂ ರಾಸಾಯನಿಕ ಗೊಬ್ಬರದ ಕಡಿಮೆ ಮಾಡಿ ಭೂಮಿಯ  ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಗೆ ಮಾಡಬೇಕೆಂದು ರೈತರಿಗೆ ತಿಳಿಹೇಳಿದರು. ಕಾರ್ಖಾನೆಯ ಪ್ರ. ಸಹಾಯಕ  ಕಬ್ಬು ಅಭಿವೃದ್ಧಿ  ಅಧಿಕಾರಿಯದಂತಹ ಸಚಿನ ಮೋಪಗಾರ ಮಾತನಾಡಿ. ರೈತರ ಇಳುವರಿ ಹೆಚ್ಚಿಸುವ ಸಲುವಾಗಿ ಕಾರ್ಖಾನೆ ಆಡಳಿತ ಮಂಡಳಿಯು ಕಬ್ಬು ಅಭಿವೃದ್ಧಿ ಯೋಜನೆ ಅಡಿಯಲ್ಲಿ  ರೈತರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಇದರ ಲಾಭ ರೈತರು ತೆಗೆದುಕೊಳ್ಳಬೇಕೆಂದು ಹೇಳಿದರು.

ತದನಂತರ ಪ್ರ.ಕೃಷಿ ವ್ಯವಹಾರ ಮ್ಯಾನೇಜರ ರಾಹುಲ ಇಂಚಲಕರಂಜಿ ಅವರು ಮಾತನಾಡಿ ಕಾರ್ಖಾನೆ ವತಿಯಿಂದ ರೈತರಿಗೆ ಅನುಕೂಲವಾಗಲು ಕಿಸಾನ್ ಬಜಾರ ಮಳಿಗೆಗಳ ಮುಖಾಂತರ ರೈತರಿಗೆ ಹಸಿರೆಲೆ ಗೊಬ್ಬರದ ಬೀಜಗಳು ಮತ್ತು ಜೈವಿಕ ಗೊಬ್ಬರಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಈ ಸಭೆಯಲ್ಲಿ ಕಾರ್ಖಾನೆಯ ಕಬ್ಬು ಮೇಲ್ವಿಚಾರಕರಾದ  ಅಶೋಕ ಪಾಟೀಲ ,ಕಬ್ಬು  ಅಭಿವೃದ್ಧಿ ಸಿಬ್ಬಂದಿಗಳು, ಕಾರ್ಖಾನೆಯ ಸಿಬ್ಬಂದಿಗಳು ಮತ್ತು ಅಂಕಲಿಯ ಗ್ರಾಮದ ಮತ್ತು ಸುತ್ತಮುತ್ತಲ ರೈತರು ಸಭೆಯಲ್ಲಿ ಹಾಜರಿದ್ದರು. 


ಸುದ್ದಿ ಓದಿ