ರಾಯಬಾಗಕ್ಕೆ ಇನ್ನಷ್ಟು ಬಸ್‌: ಶಾಸಕ ಐಹೊಳೆ

ರಾಯಬಾಗಕ್ಕೆ ಇನ್ನಷ್ಟು ಬಸ್‌: ಶಾಸಕ ಐಹೊಳೆ  More buses for Raybag: MLA Aihole


 ರಾಯಬಾಗ  07: ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಗತ್ಯವಿರುವ ಮಾರ್ಗಗಳಿಗೆ ಸರಿಯಾದ ಸಮಯದಲ್ಲಿ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.  

 ಸೋಮವಾರ ರಾಯಬಾಗ ಸಾರಿಗೆ ಘಟಕಕ್ಕೆ ಆಗಮಿಸಿದ ಎರಡು ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಘಟಕಕ್ಕೆ ಇನ್ನಷ್ಟು ಬಸ್‌ಗಳ ಅವಶ್ಯಕತೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೂತನ ಬಸ್‌ಗಳನ್ನು ಒದಗಿಸುವಂತೆ ಸಾರಿಗೆ ಸಚಿವರನ್ನು ಒತ್ತಾಯಿಸುವುದಾಗಿ ತಿಳಿಸಿದರು.  

 ಬಸ್ ನಿಲ್ದಾಣವನ್ನು ಸ್ವಚ್ಛವಾಗಿಡುವಂತೆ ಘಟಕದ ವ್ಯವಸ್ಥಾಪಕರಿಗೆ ಸೂಚಿಸಿದರು.  ಚಿಕ್ಕೋಡಿ ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ಎಂ. ಮುಂಜಿ, ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಪಕ ಜಗದೀಶಕುಮಾರ ಸೇರಿದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.