ಸಚಿವ ಎಂ. ಬಿ. ಪಾಟೀಲರವರು ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಭೇಟಿ
Minister M. B. Patil visits Siddarameshwara Temple
ವಿಜಯಪುರ 07 : ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿರುವ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಶನಿವಾರ ಸಂಜೆ ಹಾಸೀಂಪೀರ ದರ್ಗಾ ಮತ್ತು ಅರ್ಕಟ್ ದರ್ಗಾ ಹಾಗೂ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೌಹಾರ್ದತೆ ಮತ್ತು ಭಾವೈಕ್ಯತೆಯ ಪ್ರತೀಕವಾದ ಹಾಸೀಂಪೀರ ದರ್ಗಾ ಮತ್ತು ಅರ್ಕಟ್ ದರ್ಗಾಗಳಿಗೆ ಭೇಟಿ ನೀಡಿ, ನಾಡಿನ ಎಲ್ಲ ಜನತೆಯ ಒಳಿತು, ಶಾಂತಿ, ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೂಫಿ ಸಂತರು ತಮ್ಮ ಪ್ರೀತಿ, ಕರುಣೆ, ಸಹಿಷ್ಣುತೆ ಮತ್ತು ಮಾನವೀಯತೆಯ ಸಂದೇಶಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರೀದೀಪವಾಗಿದ್ದು, ಸರ್ವಧರ್ಮ ಸಮಭಾವ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರುತ್ತಿವೆ ಎಂದು ಹೇಳಿದರು.ಹಾಸಿಂಪೀರ ದರ್ಗಾ ಭೇಟಿ ಸಂದರ್ಭದಲ್ಲಿ ಹಾಸಿಂಪೀರ್ ದರ್ಗಾದ ಸಯ್ಯದ್ ಮೆಹಮೂದ್ ಹುಸೇನಿ ಹಾಸ್ಮಿ, ಸಯ್ಯದ್ ಮೊಯಿನೋದ್ದೀನ್ ಹುಸೇನಿ ಹಾಸ್ಮಿ, ಸೈಯದ್ ಜೈನುಲ್ ಅಬಿದಿನ್ ಹಾಸ್ಮಿ, ಸೈಯದ್ ವಾಜೇದಪಿರಾಂ ಹಾಸ್ಮಿ, ಮುಖಂಡರಾದ ಜಮೀರ್ ಭಕ್ಷಿ, ಶಕೀಲ್ ಬಾಗಮಾರೆ ಮುಂತಾದವರು ಉಪಸ್ಥಿತರಿದ್ದರು.
ಅರ್ಕಾಟ್ ದರ್ಗಾ ಭೇಟಿ ಸಂದರ್ಭದಲ್ಲಿ ಅರ್ಕಾಟ್ ದರ್ಗಾದ ಸಜ್ಜಾದೆ ಡಾ. ಸೈಯ್ಯದ ಶಾ ತಕಿಪಿರಾಂ ಹುಸೇನಿ, ಸಯ್ಯದ ಶಾ ಇಕ್ಬಾಲ್ ಪೀರಾಂ ಹುಸೇನಿ,ಸೈಯ್ಯದ ಶಾ ಅಲಿ ಪೀರಾಂ ಹುಸೇನಿ, ಮುಖಂಡರಾದ ಮೊಹ್ಮದ್ ರಫೀಕ್ ಟಪಾಲ್, ರಫೀಕ್ ಅಹ್ಮದ್ ಕಾಣೆ, ಅಬ್ದುಲ್ ರಜಾಕ್ ಹೊರ್ತಿ, ಎಂ. ಸಿ. ಮುಲ್ಲಾ, ಅಶ್ಪಾಕ್ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.
ನಂತರ ವಿಜಯಪುರ ನಗರದ ಐತಿಹಾಸಿಕ ಮತ್ತು ಪ್ರಸಿದ್ಧ ಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನಗರದ ಮತ್ತು ಜಿಲ್ಲೆಯ ಗುರು-ಹಿರಿಯರು ಹಾಗೂ ದೇವಾಲಯದ ಪದಾಧಿಕಾರಿಗಳು ಪ್ರೀತಿ, ವಿಶ್ವಾಸ ಹಾಗೂ ಅಭಿಮಾನದಿಂದ ಗೌರವಿಸಿದರು.ಈ ವೇಳೆ ಮಾತನಾಡಿದ ಸಚಿವರು, ಈ ದೇವಾಲಯವು ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ್ದು, ವಿಶಿಷ್ಟ ವಾಸ್ತುಶಿಲ್ಪ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದಾಗಿ ನಿತ್ಯ ಸಾವಿರಾರು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.
ಸಿದ್ದೇಶ್ವರರ ಕೃಪಾಶೀರ್ವಾದದಿಂದ ನಾಡಿನಲ್ಲಿ ಸೌಹಾರ್ದತೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಅಭಿವೃದ್ಧಿ ಮತ್ತು ಜನಕಲ್ಯಾಣದ ಕಾರ್ಯಗಳು ಮತ್ತಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಮೇಯರ್ ಎಂ. ಎಸ್. ಕರಡಿ, ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗು ಸಜ್ಜನ, ಕಾರ್ೊರೇಟರ್ ಪ್ರೇಮಾನಂದ ಬಿರಾದಾರ, ಮುಖಂಡರಾದ ಶಿವಾನಂದ, ಸುಧೀರ ಚಿಂಚಲಿ, ರಮೇಶ ಹಳ್ಳದ, ಮಲ್ಲೆಶಪ್ಪ ಗಣಿಯಾರ, ಸದಾಶಿವ ಗುಡ್ಡೋಡಗಿ ಮುಂತಾದವರು ಉಪಸ್ಥಿತರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 