ಲೋಕದರ್ಶನ ವರದಿ
ಜೀವನ ಅರ್ಥಪೂರ್ಣವಾಗಿರಲಿ: ಡಾ. ಮೋಹನ ಭಸ್ಮೆ
ಗೋಕಾಕ 15: ಅರ್ಥಪೂರ್ಣ ಜೀವನವೆಂದರೆ ನಿಮಗೆ ಮಾತ್ರವಲ್ಲ, ಇತರರಿಗೂ ಹಿತವನ್ನು ತರುವ ಬದುಕು ಎಂದು ಗೋಕಾಕ ತಾಲೂಕಿನ ತಹಶೀಲ್ದಾರ ಡಾ. ಮೋಹನ ಭಸ್ಮೆ ಹೇಳಿದರು.
ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್. ಎಸ್ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು
ಸಾನಿದ್ಯ ವಹಿಸಿದ್ದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವಂತರಾಗಬೇಕೆಂದು ತಿಳಿಸಿದರು. ಅತ್ಯುನ್ನತ ಶ್ರೇಣಿ ಪಡೆದ ಹಾಗೂ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ವ್ಹಿ. ಎ. ಕಡಕೋಳ ವಹಿಸಿದ್ದರು. ಕಾರ್ಯದರ್ಶಿ ಆರ್. ಎಮ್. ವಾಲಿ, ಪ್ರಾಂಶುಪಾಲ ಡಾ. ಬಿ. ಎಂ. ತುರಡಗಿ, ದೈಹಿಕ ಶಿಕ್ಷಕಿ ಎ.ಎಲ್. ದರಗದ ಹಾಗೂ ವಿದ್ಯಾರ್ಥಿ ಮುಖ್ಯ ಪ್ರತಿನಿಧಿ ಸೃಷ್ಠಿ ಹನಿಮನಾಳ ಉಪಸ್ಥಿತರಿದ್ದರು. ಸ್ವಾಗತ ಡಾ. ಯು.ಎಮ್.ಶಾಗೋಟಿ, ವಂದನಾರೆ್ಣ ಸಂತೋಷ ಚವ್ಹಾಣ ಹಾಗೂ ಡಾ. ಕೃಷ್ಣಮೂರ್ತಿ. ಎಮ್. ಎಸ್. ನಿರೂಪಣೆ ಮಾಡಿದರು. ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.