ಮಾಸ್ತಿಯವರು ಹುಟ್ಟಿದ ದಿನ ಜೂನ್ 6 ಕನ್ನಡದ ಆಸ್ತಿ - ಮಾಸ್ತಿ
Masti's birthday is June 6 Kannada asset - Masti
ಲೋಕದರ್ಶನ ವರದಿ
( ಇಂದು ಅವರು ಹುಟ್ಟಿದ ಮತ್ತು ಮೃತರಾದ ದಿನವೂ ಹೌದು)
ಯಮಕನಮರಡಿ 06: ಬೇಂದ್ರೆ ರಾಜರತ್ನಂ ಸಹಿತ ಅಂದಿನ ಎಲ್ಲ ಸಾಹಿತಿಗಳಿಗೆ "ಅಣ್ಣ ಮಾಸ್ತಿ" ಯಾಗಿ, "ಸಣ್ಣ ಕತೆಗಳ ಶ್ರೀನಿವಾಸ"ನಾಗಿ, ಕನ್ನಡದ ಆಸ್ತಿಯಾಗಿ , ಕನ್ನಡಕ್ಕೆ ನಾಲ್ಕನೇ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರದೊಂದು
ಅದ್ಭುತ ಜೀವನ!
ಮಾಸ್ತಿಯವರು ಹುಟ್ಟಿದ್ದೂ ಜೂನ್ ಆರರಂದು (1891) , ನಿಧನರಾದದ್ದೂ ಜೂನ್ ಆರರಂದು(1986). ಕೋಲಾರ ಜಿಲ್ಲೆ ಮಾಲೂರು ಹೊಂಗೇನಹಳ್ಳಿ ಜನ್ಮಸ್ಥಳ. ಮೂಲತಃ ತೆಲುಗಿನ ಪೆರಿಯಾರ್ ಮನೆತನ. ಪೆರಿಯಾರ್ ಎಂದರೆ ದೊಡ್ಡ ಮನೆ. ಮಾಸ್ತಿಯವರು ಹುಟ್ಟುವ ಕಾಲಕ್ಕೆ ಅದು ಎಲ್ಲಾ ಸಂಪತ್ತುಕಳೆದುಕೊಂಡು " ಸಣ್ಣಮನೆ" ಯಾಗಿಬಿಟ್ಟಿತ್ತು. ಬಡತನದಲ್ಲಿ ಸಿಲುಕಿದ ಸಂಸಾರದಲ್ಲಿ ಮಾಸ್ತಿ ವಾರಾನ್ನ ಮಾಡಿ ಕಲಿಯಬೇಕಾಯಿತು. ಆದರೆ ಎಂ. ಎ. ಪದವಿ ತನಕವೂ ಮಾಸ್ತಿಯವರು ಯಾವ ಕ್ಲಾಸಿನಲ್ಲೂ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಬೇರೆಯವರಿಗೆ ಬಿಟ್ಟುಕೊಟ್ಟವರೇ ಅಲ್ಲ. ಅಂತಹ ಬ್ರಿಲಿಯಂಟ್ ವಿದ್ಯಾರ್ಥಿ.
ಮದ್ರಾಸ ವಿ. ವಿ. ಯಲ್ಲಿ ಎಂಎ. ಮಾಡಿದ ನಂತರ ಸಿವಿಲ್ ಪರೀಕ್ಷೆಗೆ ಕುಳಿತ ಮಾಸ್ತಿಯವರು ಅಲ್ಲೂ ಪ್ರಥಮರಾಗಿ ಅಸಿ. ಕಮಿಷನರ್ ಹುದ್ದೆ ಅಲಂಕರಿಸಿ , ಕೊನೆಗೆ ಜಿಲ್ಲಾಧಿಕಾರಿಗಳಾಗಿ ನಿವೃತ್ತರಾದರು. ಇದು ಅವರ ಬದುಕಿನ ಒಂದು ಭಾಗ.
ಬಾಲ್ಯದಿಂದಲೇ ಸಾಹಿತ್ಯದ ಆಸಕ್ತಿ. 1910 ರಲ್ಲಿ ಮೊದಲ ಕತೆ " ರಂಗನ ಮದುವೆ" ಬರೆದರು. ಅಲ್ಲಿಂದ 1986 ರತನಕ ಅವರು ಒಟ್ಟು 123 ಕೃತಿಗಳನ್ನು ನೀಡಿದರು. ಕತೆ, ಕಾದಂಬರಿ, ಕಾವ್ಯ, ನಾಟಕ , ಚರಿತ್ರೆ, ಅನುವಾದ, ಪ್ರಬಂಧ ಏನೆಲ್ಲ. 1920 ರಲ್ಲಿ ಮೊದಲ ಸಣ್ಣಕತೆಗಳ ಸಂಕಲನ ಹೊರಬಂದು ಮಾಸ್ತಿಯವರು ಸಣ್ಣಕತೆಗಳ ಶ್ರೀನಿವಾಸನೆಂದೇ ಕನ್ನಡಿಗರಿಗೆ ಪ್ರಿಯರಾದರು.
ಅವರು ಎರಡು ಕಾದಂಬರಿ ಬರೆದರು. ಒಂದು ಚಿಕವೀರರಾಜೇಂದ್ರ ಮತ್ತು ಚನ್ನಬಸವನಾಯಕ. 1983 ರಲ್ಲಿ ಚಿಕವೀರರಾಜೇಂದ್ರ ಕ್ಕೆ ಜ್ಞಾನ ಪೀಠ ಪ್ರಶಸ್ತಿಯ ಮಹಾಗೌರವ ದೊರಕಿತು. 7 ಕವನ ಸಂಕಲನ, 5 ಪ್ರಬಂಧ ಸಂಕಲನ, 14 ನಾಟಕಗಳು, 2 ಜೀವನಚರಿತ್ರೆ, ನೂರಾರು ಸಣ್ಣಕತೆಗಳು ಅವರ ಅಗಾಧ ಸಾಹಿತ್ಯದ ಸಂಪತ್ತಿನಲ್ಲಿ ಸೇರಿವೆ. ಇದು ಅವರ ಬದುಕಿನ ಇನ್ನೊಂದು ಭಾಗ.
ಮಾಸ್ತಿ ಶ್ರೇಷ್ಠ ಪತ್ರಕರ್ತರೂ ಆಗಿದ್ದರು. 25 ವರ್ಷಗಳ ಕಾಲ ಅವರು " ಜೀವನ" ಎಂಬ ಮಾಸಪತ್ರಿಕೆಯನ್ನು ನಡೆಸಿದರು. ಅದು ಕನ್ನಡದ ಅತ್ಯುತ್ತಮ ಸಾಹಿತ್ಯಿಕ ಪತ್ರಿಕೆ ಯೆನಿಸಿತ್ತು. ಅದೇ ಕಾಲಕ್ಕೆ ಧಾರವಾಡದಲ್ಲಿ ಬೆಟಗೇರಿ ಕೃಷ್ಣಶರ್ಮರ ( ಆನಂದಕಂದ) ಜಯಂತಿ ಮಾಸಪತ್ರಿಕೆಯೂ ದೊಡ್ಡ ಹೆಸರು ಗಳಿಸಿತ್ತು. ವಿಶೇಷವಾಗಿ ಕನ್ನಡದ ಅಸಂಖ್ಯಾತ ಬರೆಹಗಾರರನ್ನು ಈ ಪತ್ರಿಕೆಗಳು ರೂಪುಗೊಳಿಸಿದವು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 