ದಿ/ 27ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ*ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ರದ್ಧತಿಗೆ ಬಿ ಹುಸೇನಪ್ಪ ಸ್ವಾಮಿ ಮಾದಿಗ ಒತ್ತಾಯ

ದಿ/ 27ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ*ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ  ರದ್ಧತಿಗೆ ಬಿ ಹುಸೇನಪ್ಪ ಸ್ವಾಮಿ ಮಾದಿಗ ಒತ್ತಾಯ Massive protest rally in Bengaluru on 27th*B Hussainappa Swamy Madiga demands abolition of unscienti

ಕೊಪ್ಪಳ 23: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ  ಆವೈಜ್ಞಾನಿಕ ದಿಂದ ಕೂಡಿದೆ ಅದನ್ನು ಕೂಡಲೆ ರದ್ದು ಪಡಿಸಬೇಕೆಂದು ದಲಿತ ಮುಖಂಡ ಬಿ ಹುಸೇನಪ್ಪ ಸ್ವಾಮಿ ಮಾದಿಗ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ,  ಮಾದಿಗ ಸಂಘಟನೆ ಗಳ ಒಕ್ಕೂಟ ರಾಜ್ಯ ಸಮಿತಿ ವತಿಯಿಂದ ಪರಿಶಿಷ್ಟ ಜಾತಿಗಳ ಆ ವೈಜ್ಞಾನಿಕ ಒಳ ಮೀಸಲಾತಿ ವಿರೋಧಿಸಿ ದಿ, 27 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟದ ಸಮಿತಿಯ ರಾಜ್ಯ ಸಂಚಾಲಕ ಬಿ, ಹುಸೇನಪ್ಪ ಸ್ವಾಮಿ ಮಾದಿಗ ರವರು ತಿಳಿಸಿದರು,

ಅವರು ಇಲ್ಲಿನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು, ಮುಂದುವರಿದು ಮಾತನಾಡಿಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರೋಸ್ಟರ್ ಬಿಂದು ಮಾರಿ​‍್ಡಸಲು, ಬಡ್ತಿ, ಮುಂಬಡ್ತಿ, ಎಸ್ಸಿ ಎಸ್ ಪಿ  ಟಿಎಸ್ ಪಿ ಹಾಗೂ ಮೀಸಲಾತಿ ಇರುವ ಕಡೆಯಲೆಲ್ಲಾ ಒಳಮೀಸಲಾತಿ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು  ಮಾದಿಗರು ಬಹುಸಂಖ್ಯಾತರಾಗಿರುವ 150 ವಿಧಾಣಸಭಾ ಕ್ಷೇತ್ರಗಳಲ್ಲಿ ಮತಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು,ದಿ, 27-ರಂದು ಸಮಯ: 10 ಗಂಟೆಗೆಸ್ಥಳ: ಫ್ರೀಡಂ ಪಾರ್ಕ, ಬೆಂಗಳೂರು ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು,

ಕಳೆದ 75 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒದಗಿಸಲಾದ ಮೀಸಲಾತಿಯಿಂದ ವಂಚಿತರಾದ ಮಾದಿಗ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಸಮಾನಾಗಿ ಹಂಚುವ ಏಕೈಕ ಉದ್ದೇಶದಿಂದ ಒಳಮೀಸಲಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ.ದಕ್ಷಿಣ ಭಾರತದ ರಾಜ್ಯಗಳಲ್ಲಿ 35 ವರ್ಷಗಳುತ್ಯಾಗ-ಬಲಿದಾನಗಳಿಂದ ಸಾವು-ನೋವು ಅನುಭವಿಸಿ ನ್ಯಾಯಾಲಯಗಳಿಗೆ ಮೊರೆ ಹೋಗಿ ಜೀವನಪೂರ್ತಿ ಒಳಮೀಸಲಾತಿಗಾಗಿ ನಿರಂತರವಾಗಿ ಹೋರಾಡಿದ ಪರಿಣಾಮದಿಂದಲೇ ನಮ್ಮ ತಲೆಮಾರಿಗೆ ಒಳಮೀಸಲಾತಿ ಜಾರಿ ಆಗುವ ಐತಿಹಾಸಿಕ ಸಂದರ್ಭಎದುರಾಗಿದೆ.

ಸುಪ್ರೀಂ ಕೋರ್ಟ್‌ 7 ಜನ ನ್ಯಾಯಾಧೀಶರ ತೀಪು ಬಂದು 2 ವರ್ಷಗಳಾಗಿವೆ. ದಕ್ಷಿಣ ಭಾರತದ ಆಂಧ್ರ, ತೆಲಂಗಾಣ, ತಮಿಳುನಾಡು, ಪಂಜಾಬ್, ಹರಿಯಾಣ ಇತರೆ ರಾಜ್ಯಗಳು ವಿಳಂಬ ಮಾಡದೆ ತತ್ಕ್ಷಣ ಒಳಮೀಸಲಾತಿ ಜಾರಿಗೊಳಿಸಿವೆ. ಕರ್ನಾಟಕ ರಾಜ್ಯದಲ್ಲಿ 2 ವರ್ಷ ಕಳೆದರೂ ಗೌರವಾನ್ವಿತ ನ್ಯಾಯಾಧೀಶರಾದ ಸದಾಶಿವ, ನಾಗಮೋಹನ್ ದಾಸ್, ಹಾಗೂ ಜೆ.ಸಿ. ಮಾಧುಸ್ವಾಮಿ ವರದಿಯನ್ನು ಸರ್ಕಾರ ತಳ್ಳಿಹಾಕಿದೆ. ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಬೀಸೋ ದೊಣ್ಣೆ ಏಟೀಗೆ ತಪ್ಪಿಸಿಕೊಳ್ಳಲು ಒಳಮೀಸಲಾತಿ ಜಾರಿಗೆ ತಂದಿರುವುದಾಗಿ ಬೀಗುತ್ತಿದೆ.