ಮಾರುತಿ ದೇವಸ್ಥಾನ ಕಟ್ಟಡದ ಲೋಕಾರೆ​‍್ಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಮಾರುತಿ ದೇವಸ್ಥಾನ ಕಟ್ಟಡದ ಲೋಕಾರೆ​‍್ಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ Maruti Temple building's public and idol installation ceremony

 ಬ್ಯಾಡಗಿ  28: ನಾವು ನ್ಯಾಯ, ನೀತಿ, ಧರ್ಮದಿಂದ ಬದುಕಬೇಕು. ಜಾತಿಯ ಧರ್ಮ ಅಲ್ಲ. ಸತ್ಯದ ಮಾರ್ಗದಲ್ಲಿ ಬದುಕಬೇಕು. ಸತ್ಯದ ಮಾರ್ಗದಿಂದ ಬದುಕಬೇಕೆಂದರೆ ದೇವಸ್ಥಾನದಂತಹ ಶ್ರದ್ದಾ ಕೇಂದ್ರ ಮಾಡಿದಾಗ ಅಲ್ಲಿ ಭಕ್ತರಲ್ಲಿ ಭಕ್ತಿಯ ಭಾವನೆ ಬರಲು ಸಾಧ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಶ್ರೀ ವೀರ ಮಾರುತಿ ದೇವಸ್ಥಾನ ಕಟ್ಟಡದ ಲೋಕಾರೆ​‍್ಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು. ಕಲಿಯುಗದಲ್ಲಿ ಈ ದೇವಸ್ಥಾನ ನಿರ್ಮಾಣ ಆಗಿದೆಯೋ ಅಥವಾ ಜಕಣಾಚಾರ್ಯರ ಕಾಲದಲ್ಲಿ ನಿರ್ಮಾಣ ಆಗಿದೆಯೊ ಎನ್ನುವ ಭಾವನೆ ಮೂಡುತ್ತದೆ ಅಷ್ಟು ಸುಂದರವಾಗಿದೆ.

ಮಾರುತಿ ಸಂಕಟ ನಿವಾರಕ, ನಮಗೆ ಬಂದಿರುವ ಸಂಕಟ, ದುಖ ನಿವಾರಣೆ ಮಾಡುವ ಶಕ್ತಿ ಮಾರುತಿಗೆ ಇದೆ. ಮಾರುತಿ ದೇವಸ್ಥಾನ ಯಾಕೆ ಬಹಳ ಮುಖ್ಯ ಆಗುತ್ತದೆ ಎಂದರೆ ನಮ್ಮಲ್ಲಿ ನಾಲ್ಕು ಯುಗಗಳಿವೆ ತ್ರೇತಾಯುಗ, ದ್ವಾಪರಯುಗ, ಸತ್ಯಯುಗ, ಕಲಿಯುಗ ಈ ನಾಲ್ಕೂ ಯುಗದಲ್ಲಿಯೂ ನಿರಂತರವಾಗಿ ಜೀವಂತವಾಗಿ ಇರುತ್ತಾನೆ. ರಾಮ, ಕೃಷ್ಣ ಒಂದು ಯುಗ ದಾಟಲಿಲ್ಲ ಆದರೆ ಮಾರುತಿ ಎಲ್ಲ ಯುಗದಲ್ಲಿ ಜೀವಂತ ಇರುತ್ತಾನೆ. ಅಂತಹ ಮಾರುತಿ ಕಾಲಕಾಲಕ್ಕೂ ಶಾಸ್ತ್ರತವಾಗಿ ಅಭಿವೃದ್ಧಿಯಾಗಬೇಕೆಂಬ ನಿಮ್ಮ ಸಂಕಲ್ಪ ಈಡೇರಿಸುತ್ತಾನೆ.  ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲ ಜನಾಂಗದವರು  ಹನುಮಂತ ಹಾಗೂ ಗಣೇಶ ಇಬ್ಬರನ್ನೂ ಪೂಜೆ ಮಾಡುತ್ತಾರೆ.

ದೇವಸ್ಥಾನ ನಿರ್ಮಾಣ ಮಾಡುವುದು ಒಂದು ಕಾಲಘಟ್ಟ ದೇವಸ್ಥಾನ ಮಾಡಬೇಕೆಂದು ಎಲ್ಲರ ಮನಸ್ಸಿನಲ್ಲಿ ಬರಬೇಕು. ಇಂತಹ ಸಣ್ಣ ಗ್ರಾಮದಲ್ಲಿ ಇಷ್ಟು ದೊಡ್ಡ ದೇವಸ್ಥಾನ ನಿರ್ಮಾಣ ಆಗಿದೆ ಎಂದರೆ ಈ ಗ್ರಾಮದಲ್ಲಿ ಹೃದಯ ಶ್ರೀಮಂತಿಕೆ ಜನರುಶದ್ಧಾ ಭಕ್ತಿ ಇರುವುದರಿಂದ ಭವ್ಯವಾದ, ದಿವ್ಯ ಮಂದಿರ ನಿರ್ಮಾಣ ಆಗಿದೆ ಎಂದು ಹೇಳಿದರು.ಇದರ ಕೆತ್ತನೆ ಅತ್ಯಂತ ಕಲಾತ್ಮಕವಾಗಿದೆ. ಜಕಣಾಚಾರ್ಯರ ಕಾಲದ ದೇವಸ್ಥಾನದಂತೆ ನಿರ್ಮಾಣ ಆಗಿದೆ. ನಾವು ಧರ್ಮದಿಂದ ಬದುಕಬೇಕು. ನ್ಯಾಯ, ನೀತಿ, ಧರ್ಮದಿಂದ ಬದುಕಬೇಕು. ಜಾತಿಯ ಧರ್ಮ ಅಲ್ಲ.  ಸತ್ಯದ ಮಾರ್ಗದಲ್ಲಿ ಬದುಕಬೇಕು. ಸತ್ಯದ ಮಾರ್ಗದಿಂದ ಬದುಕಬೇಕೆದರೆ ಇಂತಹ ಶ್ರದ್ಧಾ ಕೇಂದ್ರ ಮಾಡಿದಾಗ ಅಲ್ಲಿ ಭಕ್ತರಲ್ಲಿ ಭಕ್ತಿಯ ಭಾವನೆ ಬರಲು ಸಾಧ್ಯವಿದೆ. ಎಲ್ಲಿ ಧರ್ಮ ಇದೆ. ಅಲ್ಲಿ ನ್ಯಾಯ ಇದೆ. ಎಲ್ಲಿ ನ್ಯಾಯ ಇದೆ, ಅಲ್ಲಿ ನೀತಿ ಇದೆ.  

ಎಲ್ಲಿ ನೀತಿ ಇದೆ ಅಲ್ಲಿ ಮಾನವೀಯತೆ ಇದೆ. ಎಲ್ಲಿ ಮಾನವೀಯತೆ ಇದೆ ಅಲ್ಲಿ ಬೆಳಕಿದೆ ಎಂದು ಹೇಳಿದರು.ನೇಪಾಳ ಗುಡ್ಡಗಾಡು ಪ್ರದೇಶದಲ್ಲಿರುವ ದೇಶ. ಹಿಮಾಲಯದ ತಪ್ಪಲಲ್ಲಿ ಇರುವ ದೇಶ. ಅಲ್ಲಲಿ ಸಣ್ಣ ಸಣ್ಣ ಹಳ್ಳಿಗಳಿವೆ. ಯಾರು ವಿದ್ಯಾವಂತರಿಲ್ಲ. ಅವರು ಕುರಿ ಕಾಯುವ ಜನರು. ಅಲ್ಲಿ ಒಂದು ನ್ಯಾಯ, ತಂಟೆ, ಜಗಳ ಇಲ್ಲವೇ ಇಲ್ಲ. ಯಾಕೆಂದರೆ ಅಲ್ಲಿ ಒಂದು ಪದ್ಧತಿ ಇದೆ. ಎಲ್ಲರೂ ಪ್ರತಿ ದಿನ ಬೆಳಿಗ್ಗೆ ತಮ್ಮ ಕನಸಿನಲ್ಲಿ ಏನು ಬಂದಿತ್ತು ಅಂಥ ಊರಿನ ಕಟ್ಟೆಯ ಮುಂದೆ ಬಂದು ಗಹೇಳುತ್ತಾರೆ. ಅವರ ಕನಸಿನಲ್ಲಿ ಯಾರಿಗಾದರೂ ಬೈದಿದ್ದರೆ ಅದನ್ನು ಹೇಳುತ್ತಾರೆ. ಆ ಮೇಲೆ ಕ್ಷಮಾ ಮಾಡಿ ಎಂದು ಕೇಳುತ್ತಾರೆ.

ಕನಸಿನಲ್ಲಿ ಬೈದರೂ ಪಶ್ಚಾತಾಪ ಇದ್ದಾಗ ಮನುಷ್ಯರ ನಡುವೆ ದ್ವೇಷ, ಅಸೂಯೆ ತಕರಾರು ತಂಟೆಗಳಿಲ್ಲ. ಅವಿದ್ಯಾವಂತರ ಇದ್ದರೂ, ಆ ರೀತಿ ನಡೆದುಕೊಳ್ಳುತ್ತಾರೆ. ನಮ್ಮಲ್ಲಿ ಡಿಗ್ರಿ, ಪಿಜಿ ಪಡೆದರೂ, ಹಗಲಿನಲ್ಲಿಯೇ ದರೋಡೆ, ಕೊಲೆ, ಗಲಾಟೆ ಮಾಡುತ್ತೇವೆ. ಅಲ್ಲಿ ದೈವ ಭಕ್ತಿ ಇದೆ. ಅವರು ಶಾಂತ ರೀತಿಯಿದ ಬದುಕುತ್ತಿದ್ದಾರೆ. ಇದೆಲ್ಲ ತಿಳಿದುಕೊಳ್ಳದೇ ನಾವು ಒದ್ದಾಡುತ್ತಿದ್ದೇವೆ. ನಮ್ಮಲ್ಲಿ ಆಸೂಯೆ, ದುಖ್ಯ ದುಮ್ಮಾನ ಇದೆ. ಅದು ಕಡಿಮೆಯಾಗಬೇಕೆಂದರೆ ಪ್ರತಿ ಶನಿವಾರ ಇಡೀ ಊರಿನ ಜನರು ಬಂದು ದೇವರ ಪೂಜೆ ಮಾಡಬೇಕು. ಪ್ರಾಣ ಪ್ರತಿಷ್ಠಾನ ಎಂದರೆ ನಮ್ಮ ಪ್ರಾಣವನ್ನು ಭಕ್ತಿಯ ಮುಖಾಂತರ ಕೊಡಬೇಕು.

ಭಕ್ತಿ ಎಂದರೆ ಉತ್ಕೃಷ್ಟವಾದ ಪೀತಿ, ಉತ್ಕೃಷ್ಟವಾದ ಪೀತಿ ಎಂದರೆ ಕರಾರು ರಹೀತವಾದ ಭಕ್ತಿ, ಅವನಲ್ಲಿ ಕರಗಿ ಲೀನವಾಗುವುದು. ಭಕ್ತಿ ದೇವರ ಜೊತೆ ವ್ಯವಹಾರ ಮಾಡಲು ಆಗುವುದಿಲ್ಲ. ದೇವಸ್ಥಾನದ ಮುಂದೆ ನಿರಂತರ ಸಾಮೂಹಿಕ ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.ಈ ಸಂಧರ್ಭದಲ್ಲಿ ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ  ವೀರುಪಾಕ್ಷಪ್ಪ ಬಳ್ಳಾರಿ, ಬ್ಯಾಡಗಿ ಮಂಡಳದ ಅಧ್ಯಕ್ಷರಾದ  ನಿಂಗಪ್ಪ ಬಟ್ಟಲಕಟ್ಟಿ , ಕಮೀಟಿಯ ಅಧ್ಯಕ್ಷರಾದ ಹನುಮಂತಪ್ಪ ಹಂಚಿನಗೌಡ್ರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.