'ಖಾದಿ' ರಂಗು ಪಡೆದುಕೊಳ್ಳಲಿರುವ ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ
ಮಂಗಳೂರು, ಫೆ 4, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಘಟಿಕೋತ್ಸವ , ಇನ್ನಿತರ ಸಮಾರಂಭಗಳಲ್ಲಿ ಖಾದಿ ಧಿರಿಸು ಬಳಸ ಬೇಕೆಂದು ವಿಶ್ವ ವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ತನ್ನ ವಿಧ್ಯುಕ್ತ ಸಮಾರಂಭಗಳಲ್ಲಿ ಖಾದಿ - ಸಿಲ್ಕ್ ನಿಲುವಂಗಿ ಬಳಸಲು ನಿರ್ಧರಿಸಿದೆ.ಪದವಿ ಪ್ರದಾನ ಮಾಡುವ ಘಟಿಕೋತ್ಸವ ಕಾರ್ಯಕ್ರಮದ ನಿಯಮಾವಳಿ ತಿದ್ದುಪಡಿಗಳಿಗೆ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸಭೆ ಅನುಮೋದನೆ ನೀಡಿದೆ. ಕುಲಪತಿಗಳು ಧರಿಸುವ ನಿಲವಂಗಿ ಕಡು ಕೆಂಪು ವರ್ಣದ್ದಾಗಿರಲಿದ್ದು ಮೇಲು ಹೊದಿಕೆ ನೀಲಿ ಹಾಗೂ ಚಿನ್ನದ ಬಣ್ಣದ ಅಂಚು ಹೊಂದಿರಲಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ರಿಜಿಸ್ಟಾರ್ ಪ್ರೋ. ಎ.ಎಂ ಖಾನ್ ಮಂಗಳವಾರ ಹೇಳಿದ್ದಾರೆ. ಪ್ರೊ ಚಾನ್ಸಲರ್ ನಿಲುವಂಗಿ ನೀಲಿ ಬಣ್ಣದ್ದಾಗಿರಲಿದೆ, ಉಪ ಕುಲಪತಿ ನಿಲುವಂಗಿ ಅಕಾಶ ನೀಲಿ ಬಣ್ಣದ್ದಾಗಿರಲಿದೆ ಎಂದು ವಿವರಿಸಿದರು.
ಡಿಎಸ್ಟಿ ಗೌರವ ಪದವಿ ಸ್ವೀಕರಿಸುವವರು ಕೆಂಪು ಬಣ್ಣದ ‘ಅಂಗವಸ್ತ್ರಂ’ ಹೊಂದಿರುವ ಬಿಳಿ ನಿಲುವಂಗಿಯನ್ನು ಧರಿಸುತ್ತಾರೆ ಮತ್ತು ಡಿಲಿಟ್ ಸ್ವೀಕರಿಸುವವರು ಆಕಾಶ ನೀಲಿ ‘ಅಂಗವಸ್ತ್ರ’ ಹೊಂದಿರುವ ಬಿಳಿ ನಿಲುವಂಗಿಯನ್ನು ಧರಿಸಲಿದ್ದಾರೆ.ಆದೇ ರೀತಿ ರಿಜಿಸ್ಟಾರ್, ರಿಜಿಸ್ಟಾರ್ (ಮೌಲ್ಯಮಾಪನ), ಡೀನ್, ಅಕಾಡೆಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರ ನಿಲುವಂಗಿಗಳ ಬಣ್ಣಗಳು ಬದಲಾಗಿವೆ ಉಪ ಕುಲಪತಿ ಪ್ರೋ. ಪಿ.ಎಸ್. ಯಡಪಡಿತ್ತಾಯ, ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ಯೋಜಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕ ಹಾಗೂ ವಿದ್ಯಾರ್ಥಿ ತರಗತಿ ಪ್ರವೇಶಿಸುವಾಗ, ತರಗತಿ ಮುಗಿದಾಗ ಪಂಚ್ ಮಾಡಲು ಸಾಧ್ಯವಾಗುವಂತೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪ್ರತಿ ಶಾಲಾ ಕೊಠಡಿಯ ಬಳಿ ಅಳವಡಿಸಲಾಗುವುದು. ಹಾಜರಾತಿ ಕೊರತೆ ಎದುರಿಸುವ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಬಹುದು. ಬಯೋಮೆಟ್ರಿಕ್ ಹಾಜರಾತಿ ಒಂದು ದಾಖಲೆಯಾಗಿದ್ದು, ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು ಎಂದರು ವಿಶ್ವ ವಿದ್ಯಾಲಯದಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ, ಸೋಲಾರ್ ಪ್ಯಾನಲ್ ಹಾಗೂ ಸಿಸಿಟಿವಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಅಂತರಿಕ ತನಿಖೆಯನ್ನು ಆರಂಭಿಸ ಲಾಗುವುದು. ವಿಶ್ವವಿದ್ಯಾಲಯದ ಆವರಣದಲ್ಲಿನ ಭದ್ರತೆಯನ್ನು ಬಲಪಡಿಸಲು ಹಾಲಿ ಇರುವ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪರಿಗಣಿಸಬೇಕಿದೆ ಎಂದು ಹೇಳಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 