ಯೋಗದ ಸತ್ಸಂಗ ಬೆಳಗಾವಿ ಕೇಂದ್ರದಲ್ಲಿ ಮಹಾವತಾರ್ ಬಾಬಾಜಿ ಸ್ಮೃತಿ ದಿವಸ ಆಚರಣೆ
Mahavatar Babaji Commemoration Day celebrated at the Yoga Satsang Belagavi Centre
ಬೆಳಗಾವಿ 27: ಯೋಗದ ಸತ್ಸಂಗ ಬೆಳಗಾವಿ ಧ್ಯಾನ ಕೇಂದ್ರದಲ್ಲಿ ಸೋಮವಾರ ಮಹಾವತಾರ್ ಬಾಬಾಜಿ ಅವರ ಸ್ಮೃತಿ ದಿವಸವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಕತ್ತಾದ ದಕ್ಷಿಣೇಶ್ವರದಿಂದ ಆಗಮಿಸಿದ್ದ ಸ್ವಾಮಿ ಶ್ರೇಯಾನಂದಜಿ ಹಾಗೂ ರಾಂಚಿಯಿಂದ ಆಗಮಿಸಿದ್ದ ಸ್ವಾಮಿ ನಿರ್ಮಲಾನಂದಜಿ ಅವರು ಮಹಾವತಾರ್ ಬಾಬಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸ್ವಾಮಿ ಶ್ರೇಯಾನಂದಜಿ ಅವರು ಮಾರ್ಗದರ್ಶಿತ ಧ್ಯಾನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಕ್ತರಿಗೆ ದೃಢೀಕರಣ (ಅಫರ್ಮೇಶನ್) ಅಭ್ಯಾಸ ಮಾಡಿಸಿದ ಅವರು, ಮಹಾವತಾರ್ ಬಾಬಾಜಿ ಅವರ ಅತ್ಯಂತ ಪ್ರಿಯ ಗುಣವಾದ ವಿನಮ್ರತೆಯ ಮಹತ್ವವನ್ನು ವಿವರಿಸಿದರು. ಧ್ಯಾನದ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಆತ್ಮತೃಪ್ತಿಯನ್ನು ಪಡೆಯಲು ಸಾಧ್ಯ. ಮನುಷ್ಯನ ಬದುಕಿನಲ್ಲಿ ಮಾನಸಿಕ ಶಾಂತಿಯೇ ಅತ್ಯಂತ ಮುಖ್ಯವಾಗಿದ್ದು, ಅದು ಧ್ಯಾನದಿಂದ ಲಭಿಸುತ್ತದೆ ಎಂದು ತಿಳಿಸಿದರು.
ನಿತ್ಯವೂ ಮಹಾವತಾರ್ ಬಾಬಾಜಿ ಅವರನ್ನು ಸ್ಮರಿಸುತ್ತಾ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು. ಆಧ್ಯಾತ್ಮಿಕ ಸಾಧನೆಯ ತಳಹದಿಯೇ ವಿನಮ್ರತೆ ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆತ್ಮೋನ್ನತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಈ ವೇಳೆ ಸ್ವಾಮಿ ನಿರ್ಮಲಾನಂದಜಿ ಅವರು ’ಆಧ್ಯಾತ್ಮಿಕ ಪಥದಲ್ಲಿ ಗುರುವಿನ ಪಾತ್ರ’ ಕುರಿತು ಉಪನ್ಯಾಸ ನೀಡಿದರು. ಪರಮಹಂಸ ಯೋಗಾನಂದರು ಹಾಗೂ ಅವರ ನೇರ ಶಿಷ್ಯರ ಜೀವನದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು,
ಯಾವುದೇ ಸಾಧನೆ ಮಾಡಬೇಕಾದರೂ ಸದ್ಗುರುವಿನ ಮಾರ್ಗದರ್ಶನ ಅತ್ಯಗತ್ಯ ಎಂದರು. ಗುರುಗಳ ಆದರ್ಶ ಮತ್ತು ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಧ್ಯಾನದ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿ ಉತ್ತಮ ಕಾರ್ಯಗಳನ್ನು ಸಾಧಿಸಬಹುದು. ಆಧ್ಯಾತ್ಮಿಕ ಜೀವನದ ಅರಿವಿಗಾಗಿ ಯೋಗಿಯ ಆತ್ಮಕಥೆ ಗ್ರಂಥವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಧ್ಯಾನ ಕೇಂದ್ರದ ಪದಾಧಿಕಾರಿಗಳಾದ ಶಶಿಕಾಂತ ಚುನಮರಿ, ಕರ್ನಲ್ ಮಾರನಬಸರಿ, ಓಬಳೇಶ್ವರ ದಾನೋಜಿ, ಶೈಲಜಾ ಕೋರಿಶೆಟ್ಟಿ, ಮಂಜುಳಾ ಚುನಮರಿ ಸೇರಿದಂತೆ ಯೋಗದ ಸತ್ಸಂಗದ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 