ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣವಾಗಿ ಮಡಿವಾಳಯ್ಯ ಹಿರೇಮಠ ಅವರ ಜನ್ಮದಿನ ಆಚರಣೆ
Madivalayya Hiremath's birthday celebrated meaningfully through a blood donation camp
ಲೋಕದರ್ಶನ ವರದಿ
ವಿಜಯಪುರ, ಜ. 01: ಮಣಿಕಂಠ ಫೌಂಡೇಶನ್ ವಿಜಯಪುರದ ಸದಸ್ಯರಾದ ಶ್ರೀ ಮಡಿವಾಳಯ್ಯ ಹಿರೇಮಠ ಅವರ 38ನೇ ವರ್ಷದ ಜನ್ಮದಿನದ ಅಂಗವಾಗಿ, ಅವರ ಅನುಪಸ್ಥಿತಿಯಲ್ಲಿಯೂ ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ ನಡೆಸಿದರು.
ಶಿವಶಕ್ತಿ ನಗರದ ಅವರ ನಿವಾಸದ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀ ಸಿದ್ದೇಶ್ವರ ರಕ್ತ ಕೇಂದ್ರ, ವಿಜಯಪುರ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅನೇಕ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಸೇವೆಗೆ ಕೈಜೋಡಿಸಿದರು.
ಇದೇ ವೇಳೆ ನಗರದ ವಿವಿಧ ನಿರ್ಗತಿಕರಿಗೆ ಹಣ್ಣು ಹಂಪಲು ಹಾಗೂ ಊಟವನ್ನು ವಿತರಿಸಲಾಯಿತು. ಜನ್ಮದಿನವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುವ ಮೂಲಕ ಮಡಿವಾಳಯ್ಯ ಹಿರೇಮಠ ಅವರ ಅಭಿಮಾನಿಗಳು ಮಾದರಿಯಾದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಮಡಿವಾಳಯ್ಯ ಹಿರೇಮಠ, ಸದಸ್ಯರಾದ ಅಮೋಘ ಕರಾಂಡೆ, ಕಲ್ಲಪ್ಪ ಕುಂಬಾರ, ರಮೇಶ್ ಪಡಸಲಗಿ, ಯಾಸೀನ್, ಧಾರಾಸಿಂಗ್ ಪವಾರ್, ಪವನ್ ಹಿರೇಮಠ ಸೇರಿದಂತೆ ಸ್ನೇಹಿತರ ಬಳಗ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ 